/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಮೊಗುತಿ ಹಾಕಿ ಬೀಗೋ ಹುಡುಗೀರಾ ಎಲ್ಲಾರು ಕಂಡಿರಾ..!

Published

on

ಮೂಗುತಿ ಸುಂದರಿಯರು

ಮೂಗುತಿ ಎಂದರೆ “ಓಲ್ಡ್ ಫ್ಯಾಷನ್ ” ಎಂದು ಮೂಗು ಮುರಿಯುತ್ತಿದ್ದ ಹೆಂಗಳೆಯರು, ಇಂದು ಸಮಯದೂಂದಿಗೆ ಬದಲಾದ ಮೂಗುತಿಯ ಹೂಸ ರೂಪಕ್ಕೆ ಮಾರುಹೋಗಿದ್ದಾರೆ. “ಓಲ್ಡ್ ಈಸ್ ಗೋಲ್ಡ್ ” ಎಂಬ ನಾಣ್ನುಡಿಯಂತೆ.. ಈ ಹಿಂದೆ ಆಧುನೀಕರಣದ ಹೆಸರಲ್ಲಿ ತಿರಸ್ಕೃತ ಗೊಂಡಿದ್ದ ಮೂಗುತಿ ಮಾನಿನಿಯರ ಮೂಗನ್ನು ಅಲಂಕರಿಸಿದೆ.

ಭಾರತೀಯ ಸಂಸ್ಕೃತಿ ಯಲ್ಲಿ’ಮೂಗುತಿ’ ವಿಶೇಷ ಸ್ಥಾನ ಪಡೆದಿದೆ. ಮುತ್ತೈದೆಯರ ಐದು ಮುತ್ತುಗಳಲ್ಲಿ ಇದೂ ಒಂದು. ಈ ಹಿಂದೆ ,ಮದುವೆ ನಿಶ್ಚಯ ವಾದ ಮೇಲೆ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುವ ಪ್ರತೀತಿ ಇತ್ತು . ಈಗಲೂ ಕೆಲ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಈ ವಾಡಿಕೆ ಮುಂದುವರೆದಿದೆ.

ಮೂಗುತಿ ಏಕೆ ಧರಿಬರಬೇಕು ?

1. ಮೂಗುತಿ ಧರಿಸುವುದರಿಂದ ಋಣಾತ್ಮಕ ಶಕ್ತಿ ತಗ್ಗಿಸುತ್ತದೆ. ಮೂಗಿನ ಬಿಂದುವಿನ ಮೇಲೆ ಒತ್ತಡ ನಿರ್ಮಾಣ ವಾಗುವುದರಿಂದ ಕೆಟ್ಟ ಶಕ್ತಿ ನಿರ್ನಾಮ ವಾಗುತ್ತದೆ.

2.  ಮೂಗುತಿ ಧಾರಣೆ ಶ್ವಾಸಮಾರ್ಗ ಹಾಗೂ ಉಸಿರಾಟದಮಾರ್ಗವನ್ನು ರಕ್ಷಿಸುತ್ತದೆ.

3. ಮೂಗುತಿಯು ಚೈತನ್ಯ ದಾಯಕವಾಗಿದ್ದು ಮೂಗಿನ ಸುತ್ತಲಿನ ವಾಯುಮಂಡಲವನ್ನು ಶುದ್ಧಗೊಳಿಸುತ್ತದೆ.

4.  ಸ್ತ್ರೀ ಮನಸ್ಸು  ಚಂಚಲ. ಮೂಗುತಿ ಧರಿಸುವುದರಿಂದ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಹಿಡಿತಕ್ಕೆ ಬರುತ್ತದೆ.

ಸ್ಯಾಂಡಲ್ ವುಡ್ ನ ಅಪ್ರತಿಮ ಮೂಗುತಿ ಸುಂದರಿಯರಮೂಗುತಿ ಫ್ಯಾಷನ್

ಈಗಂತೂ ಸ್ಯಾಂಡಲ್ ವುಡ್ ಬ್ಯೂಟಿ ಗಳು ಮೂಗುತಿ ಗೆ ಫುಲ್ ಫಿದಾ ಆಗಿದ್ದಾರೆ. ಸಂಪ್ರದಾಯಿಕ ಅಥವಾ ಪಾಶ್ಚಾತ್ಯ ಶೈಲಿಯ ಸ್ಟೈಲ್ ಆಗಿರಲಿ, ಅದರೊಂದಿಗೆ ಮೂಗುತಿ ಇರಲೇ ಬೇಕು. ಇತ್ತೀಚೆಗೆ ಮೂಗುತಿ ಫ್ಯಾಷನ್ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ.

ರಾಧಿಕಾ ಪಂಡಿತ್ ತಮ್ಮ ನಿಶ್ಚಿತಾರ್ಥ ಕ್ಕೆ ತೊಟ್ಟ ಮೂಗುತಿ ಸೋಷಿಯಲ್ ಮೀಡಿಯಾ ದಲ್ಲಿ ಎಷ್ಟರಮಟ್ಟಕ್ಕೆ ವೈರಲ್ ಆಗಿತ್ತೆಂದರೇ.. ಮಾರುಕಟ್ಟೆಯಲ್ಲಿ ರಾಧಿಕಾ ಪಂಡಿತ್ ಮೂಗುತಿ ಎಂದೇ ಆ ಡಿಸೈನ್ ಮೂಗುತಿ ಫೇಮಸ್ ಆಗಿ ಹೋಯಿತು. ಸ್ಯಾಂಡಲ್ ವುಡ್ ಕಂಡ ಅಪ್ರತಿಮ ಮೂಗುತಿ ಸುಂದರಿ ಯರಲ್ಲಿ ಇವರೂ ಒಬ್ಬರು.

ಮೂಗುತಿ ಸುಂದರಿ ಎಂದೇ ಹೆಸರಾಗಿರುವ ಬಿಗ್ ಬಾಸ್ ಮತ್ತು ಅಕ್ಕ ಖ್ಯಾತಿಯ ಅನುಪಮಾ ಗೌಡ ರ ಮೂಗುತಿ ಸ್ಟೈಲ್ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್! ಈ ಸುಂದರಿಯ ಸೊಬಗಿಗೆ ಕನ್ನಡಿ ಹಿಡಿದಂತಿದೆ ಮೂಗುತಿ. ಇವರ ಸೋಷಿಯಲ್ ಪ್ರೊಫೈಲ್ ನಲ್ಲಿ ಇವರ ಮೂಗುತಿ ಕ್ರೇಜ್ ಕಾಣಿಸುತ್ತದೆ. ದೊಡ್ಡ ಗಾತ್ರದ ಮೂಗುತಿ, ಚಿಕ್ಕ ಮೂಗುತಿ, ಬ್ಲಾಕ್ ಹೀಗೆ ಹಲವಾರು ಬಗೆಯ ಬಗೆಯ ಮೂಗುತಿ ಗಳಲ್ಲಿ ಮಿಂಚುತ್ತಿದ್ದಾರೆ” ಆ ಕರಾಳ ರಾತ್ರಿ” ಚಿತ್ರದ ನಾಯಕಿ ಅನುಪಮಾ ಗೌಡ.

 

ಇನ್ನು ನಮ್ಮ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ  ಮೂಗುತಿ ಸುಂದರಿ ಯರ ಸಾಲಿಗೆ ಸೇರಿದವರೇ. ಇತ್ತೀಚಿನ ಫೋಟೋ ಶೂಟ್ ಒಂದರಲ್ಲಿ ಈಕೆ ಧರಿಸಿರುವ ಕಪ್ಪು ಲೋಹದ ಮೂಗುತಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

 

ಸ್ಯಾಂಡಲ್ ವುಡ್ ನ ಮೂಗುತಿ ಸುಂದರಿ ಯರ ಸಾಲಿಗೆ ಸೇರಿದ ಮತ್ತೊಬ್ಬ ನಟಿ ಶೃತಿ ಹರಿಹರನ್. ಊರ್ವಿ ಖ್ಯಾತಿಯ ಈ ಚೆಲುವೆ ಅತ್ಯುತ್ತಮ ಅಭಿನೇತ್ರಿ ಅಷ್ಟೇ ಅಲ್ಲದೆ, ತಮ್ಮ ವಿಶಿಷ್ಟ ಸ್ಟೈಲ್ ಮತ್ತು ಫ್ಯಾಷನ್ ಗೆ ಹೆಸರಾಗಿರುವ ನಟಿ.ಮೂಗುತಿ ಎಂದರೆ ನನಗಿಷ್ಟ ಎಂದು ತಮ್ಮ ಸೋಷಿಯಲ್ ಮೀಡಿಯಾ ದ ಪ್ರೊಫೈಲ್ ನಲ್ಲಿ ಹಂಚಿಕೊಂಡಿದ್ದಾರೆ ಕೂಡ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version