ದಿನದ ಸುದ್ದಿ

ಬಳ್ಳಾರಿಯಲ್ಲಿ ಅ.21 ರಿಂದ ಸಂಗಂ ವಿಶ್ವ ಕವಿ ಸಮ್ಮೇಳನ

Published

on

ಸುದ್ದಿದಿನ ಡೆಸ್ಕ್ : ಬಳ್ಳಾರಿಯಲ್ಲಿ ( Bellary ) ಇದೇ ತಿಂಗಳ 21 ರಿಂದ ಮೂರು ದಿನ ಸಂಗಂ ವಿಶ್ವ ಕವಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ದೇಶ,ವಿದೇಶ ಹಾಗೂ ವಿವಿಧ ಜಿಲ್ಲೆಗಳ ಕವಿಗಳು ( poets )ಭಾಗವಹಿಸಿ ತಮ್ಮ ಕಾವ್ಯ ವಾಚನ ಮಾಡಲಿದ್ದಾರೆ.

ಒಟ್ಟು 21 ಗೋಷ್ಟಿಗಳು ನಡೆಯಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊಫೆಸರ್ ಚಂದ್ರಶೇಖರ ಕಂಬಾರ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಅಕ್ಟೋಬರ್ 22 ರಂದು ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಕ್ಟೋಬರ್ 23 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ ಹೆಚ್.ಎಸ್.ಶಿವಪ್ರಕಾಶ್ ಸೇರಿದಂತೆ ಅನೇಕ ಖ್ಯಾತ ಕವಿಗಳು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version