ದಿನದ ಸುದ್ದಿ

ಪೀರನವಾಡಿಯಲ್ಲಿ ಕೊನೆಗೂ ಸ್ಥಾನ ಪಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ; ಮೂರ್ತಿ ಸ್ಥಾಪನೆ ನಂತರ ಸಚಿವ ಈಶ್ವರಪ್ಪ ಹೇಳಿದ್ದೇನು ಗೊತ್ತಾ?

Published

on

ಸುದ್ದಿದಿನ,ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ವಿಚಾರವಾಗಿ ಎದ್ದಿದ್ದ ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ. ರಾಯಣ್ಣ ಹುಟ್ಟಿದ ನೆಲದಲ್ಲಿ ಸಾವಿರಾರು ಹೋರಾಟಗಾರರ ಪ್ರತಿಭಟನೆಯ ನಂತರ ಸರ್ಕಾರ ಪುತ್ಥಳಿ ಸ್ಥಾಪನೆ ಮಾಡಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿತ್ತು. ಈ ವಿಚಾರವಾಗಿ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿತ್ತು. ಶನಿವಾರ ಪೀರನವಾಡಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾಲಾರ್ಪಷೆ ಮಾಡಿ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಈ ವೇಳೆ ಮಾತನಾಡಿದ ಈಶ್ವರಪ್ಪ, ದೇಶಕ್ಕಾಗಿ ಒಂದಾಗಿರುಬೇಕು ಎಂದು ತೋರಿಸಿಕೊಟ್ಟ ಕ್ಷೇತ್ರ ಪೀರನವಾಡಿ. ಇದಕ್ಕೆ ಪ್ರಯತ್ನ ಮಾಡಿರುವ ಜಿಲ್ಲಾ ಸಚಿವ ರಮೇಶ ಜಾರಕಿಹೊಳಿ ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ ಪ್ರಾಣವನ್ನು ಒತ್ತೆಯಿಟ್ಟು ತಾಯಿ ಚನ್ನಮ್ಮಳ ಮಾರ್ಗದರ್ಶನದಂತೆ ಬ್ರಿಟಿಷರ ವಿರುದ್ಧ ಮಾಡಿದ ವೀರ ಯೋಧ. ಛತ್ರಪತಿ ಶಿವಾಜಿ ಮಹಾರಾಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುರುಷರು. ಇವತ್ತು ಅವರಿಬ್ಬರು ಒಂದೇ ಕಡೆ ಇದ್ದು, ನಾವು ಭಾಷೆ, ಮರಾಠಿ, ಕನ್ನಡ, ಜಾತಿ, ಪ್ರಾಂತ ನೋಡುವುದಿಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version