ದಿನದ ಸುದ್ದಿ
ನವಿಲೇಹಾಳ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಯಾನಿಟೈಸ್
ಸುದ್ದಿದಿನ,ದಾವಣಗೆರೆ,ಚನ್ನಗಿರಿ : ನವಿಲೆಹಾಳ್ ಗ್ರಾಮಪಂಚಾಯಿತಿ ವ್ಯಾಪ್ತಿಯ ನವಿಲೆಹಾಳ್, ದೊಡ್ಡಘಟ್ಟ, ರಾಮಗೊಂಡನಹಳ್ಳಿಯಲ್ಲಿ ಮೇ ತಿಂಗಳಲ್ಲಿ ಎರಡನೇ ಬಾರಿಗೆ ಗ್ರಾಮದ ಜನರ ಅರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸೇಷನ್ ಮಾಡಲಾಯಿತು.
ನವಿಲೆಹಾಳ್ ಗ್ರಾಮಪಂಚಾಯಿತಿಯಲ್ಲಿ ಕರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪಡೆ ರಚಿಸಿ, ಪ್ರತಿದಿನ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರು ಹಾಗೂ ಸದಸ್ಯರ ತಂಡ ರಚಿಸಿ ಮನೆ ಸರ್ವೆ ಮಾಡಿಸಿ, ಸೋಂಕಿನ ಲಕ್ಷಣ ಕಂಡು ಬಂದರೆ ತಕ್ಷಣ ಸ್ಲಾಬ್ ಟೆಸ್ಟ್ ಮಾಡಿಸುವುದು, ಗ್ರಾಮದಲ್ಲಿ ವ್ಯಾಕ್ಸಿನೇಷನ್ ಮಾಡಿಸುವುದು, ಸಂಪೂರ್ಣ ಗ್ರಾಮವನ್ನು 15ದಿನಗಳಿಗೊಮ್ಮೆ ಸ್ಯಾನಿಟೈಜ್ ಮಾಡಿಸುವುದು, ಈ ರೀತಿ ಕ್ರಮಗಳನ್ನು ಕೈಗೊಂಡು 13ಕೇಸ್ ಇದದ್ದನ್ನು ಕೇವಲ ಒಂದೇ ಒಂದು ಆಕ್ಟಿವ್ ಕೇಸ್ ಗೆ ಇಳಿಸಲಾಗಿದೆ ಎಂದು ಗ್ರಾಮಪಂಚಾಯಿತಿ ಮೂಲಗಳು ತಿಳಿಸಿವೆ.
ಸ್ಯಾನಿಟೈಸೇಷನ್ ಗ್ರಾಮಪಂಚಾಯಿತಿಯ ಅಧ್ಯಕ್ಷೆಯಾದ ಶ್ರೀಮತಿ ಶಬ್ನಮ್ ಮೋಸಿಮಕಿಲ್ ರವರ ನೇತೃತ್ವದಲ್ಲಿ ನೆಡಸಲಾಯಿತು, ಉಪಾಧ್ಯಕ್ಷರು ಈರಮಾಂಬಾ, ಪಿಡಿಓ ಚಂದನ್ ಕುಮಾರ್, ಸದಸ್ಯರಾಧಾ ದೇವರಾಜ್, ಮಂಜುನಾಥ್, ಹನುಮಂತಪ್ಪ, ಅನ್ವರ್, ಹಜರತ್ ಅಲಿ, ರೇಣುಕಾಮೋಹನ್, ವಿಜಯ್ ಕುಮಾರ್, ರವಿ, ಹುಮಾಯುನ್, ಶಿವು, ಹಾಜರಿದ್ದರು.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243