ದಿನದ ಸುದ್ದಿ
ಮತ್ತೆ ಸಿಸಿಬಿ ಕಸ್ಟಡಿಗೆ ಸಂಜನಾ-ರಾಗಿಣಿ..!
ಸುದ್ದಿದಿನ, ಬೆಂಗಳೂರು: ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ಮುಕ್ತಾಯಗೊಂಡಿದ್ದು, ನಟಿಯರೂ ಸೇರಿದಂತೆ ಪ್ರಕರಣದ ಆರೂ ಮಂದಿ ಆರೋಪಿಗಳನ್ನು ನ್ಯಾಯಾಲಯವು ಇಂದು ಮತ್ತೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಹೌದು, ಪ್ರಕರಣದ ಆರೋಪಿಗಳಾದ ನಟಿಯರು, ವೀರೇನ್ ಖನ್ನಾ, ರವಿಶಂಕರ್, ಲೂಮಾ ಪೆಪ್ಪರ್ ಹಾಗೂ ರಾಹುಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ಕೋರ್ಟ್ ಈ ತೀರ್ಪಿತ್ತಿದ್ದು, ನಟಿಯರಿಗೆ ಸಾಂತ್ವನ ಕೇಂದ್ರವೇ ವಾಸಸ್ಥಾನವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243