ದಿನದ ಸುದ್ದಿ
ದೇಶದ ಒಂದು ಲಕ್ಷ ಕೇಂದ್ರಗಳಲ್ಲಿ ಇ-ಸಂಜೀವಿನಿ ಟೆಲಿ ಸಮಾಲೋಚನೆ ಸೌಲಭ್ಯಕ್ಕೆ ಚಾಲನೆ
ಸುದ್ದಿದಿನ ಡೆಸ್ಕ್ : ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಕ್ಷೇಮ ಯೋಜನೆಯ 4ನೇ ವರ್ಷಾಚರಣೆಯ ಅಂಗವಾಗಿ ಸರ್ಕಾರ ಇಂದು ದೇಶದ ಒಂದು ಲಕ್ಷ ಕೇಂದ್ರಗಳಲ್ಲಿ ಇ-ಸಂಜೀವಿನಿ ಟೆಲಿ ಸಮಾಲೋಚನೆ ಸೌಲಭ್ಯಗಳಿಗೆ ಚಾಲನೆ ನೀಡಲಿದೆ.
ಯೋಜನೆಯಿಂದ ಜನಸಾಮಾನ್ಯರು ದೇಶದ ಪ್ರತಿಷ್ಠಿತ ವೈದ್ಯರುಗಳಿಂದ ಆರೋಗ್ಯ ಸಲಹೆ-ಸೂಚನೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಕ್ಷೇಮ ಯೋಜನೆಯಡಿ ಪ್ರಾಥಮಿಕ ಆರೋಗ್ಯ ರಕ್ಷಣಾ ಕಾರ್ಯಜಾಲವನ್ನು ಸರ್ಕಾರ ಬಲಪಡಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ ಒಂದು ಲಕ್ಷ 17ಸಾವಿರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಚಿವ ಮನ್ಸುಖ್ ಮಾಂಡವೀಯ ವಿವರಿಸಿದ್ದಾರೆ.
Addressing the 4th Anniversary Celebrations of Ayushman Bharat Health and Wellness Centres. #4YearsofHWC
https://t.co/ki1QWWSFUM— Dr Mansukh Mandaviya (@mansukhmandviya) April 16, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243