ಲೈಫ್ ಸ್ಟೈಲ್

‘ಸಂಕ್ರಾಂತಿ’ ಗೆ ನಡೆದಿದೆ ಫ್ಯಾಷನ್ ಕ್ರಾಂತಿ..!

Published

on

  • ಚಿತ್ರಶ್ರೀ ಹರ್ಷ

ಫ್ಯಾಷನ್ ಅಂಗಳದಲ್ಲೂ ಸಂಕ್ರಾಂತಿ ಕಂಪು ಸೂಸುತ್ತಿದೆ. ಬಣ್ಣ ಬಣ್ಣದ ದೊಡ್ಡ ಜರತಾರಿ ಅಂಚಿನ ಲಂಗ ಲಾವಣಿ,  ಜರತಾರಿ ಸೀರೆ, ಕಾಟನ್ ಚೆಕ್ಸ್  ಸೀರೆ, ಹೀಗೆ ಹಲವಾರು ವೆರೈಟಿಗಳಲ್ಲಿ ಹಳ್ಳಿಯ ಸರಳತೆ ಬಿಂಬಿಸುವ ಸಂಕ್ರಾಂತಿ ಫ್ಯಾಷನ್ ಮಾರುಕಟ್ಟೆ ಪ್ರವೇಶಿಸಿದ್ದು,  ಬಣ್ಣದ ಲೋಕದಲ್ಲಿ ಸಾಂಪ್ರದಾಯಿಕ ಉಡುಪುಗಳ ಟ್ರೆಂಡ್ ಚಾಲ್ತಿಯಲ್ಲಿದೆ.

ಸಂಕ್ರಾಂತಿ ಎಂದರೆ ಎಲ್ಲೆಲ್ಲೂ ಸಂಭ್ರಮ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಖುಷಿಯಿಂದ ಆಚರಿಸುತ್ತಾರೆ. ಮನೆಮನೆಗೆ ತೆರಳಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸುವುದರ ಜೊತೆಗೆ ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವಂತೆ ಫ್ಯಾಷನ್ ದೃಷ್ಟಿಯಿಂದಲೂ ಎಲ್ಲರೂ ಅಪ್ಡೇಟ್ ಆಗುವ ಕಾಲವಿದು. ಕುಟುಂಬದವರೆಲ್ಲಾ ಸೇರಿ ಸಂಭ್ರಮಿಸುವ ಸಂದರ್ಭ ಇದಾಗಿರುವುದರಿಂದ ಆದಷ್ಟು ಸಾಂಪ್ರದಾಯಿಕ ದಿರಿಸುಗಳನ್ನೇ ಧರಿಸಿ.

ಇಂದಿನ ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಸಾಂಪ್ರದಾಯಿಕ ಲಂಗ-ಸೀರೆ ಹೂಸ ಅವತಾರ ಎತ್ತಿದ್ದು, ಕಾಂಟೆಂಪರರೀ ಸೀರೆ , ಲೆಹೆಂಗಾ ಗಳು ಸಾಂಪ್ರದಾಯಿಕ ಉಡುಪುಗಳನ್ನು ರೀಪ್ಲೇಸ್ ಮಾಡಿದ್ದವು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಫ್ಯಾಷನ್ ಲೋಕದಲ್ಲೂ  ಸಮ್( some)  -ಕ್ರಾಂತಿ ಆಗಿದ್ದು ಸುಗ್ಗಿ ಸಾಡಗರಕ್ಕೆ ಜರತಾರಿ ಲಂಗ ದಾವಣಿ ತೊಟ್ಟ ನಾಗವೇಣಿ ಯರ  ಕಾಲ್ಗೆಜ್ಜೆ ಧನಿ ಪ್ರತಿಧ್ವನಿಸುತ್ತಿದೆ.

ಭಾರತೀಯ ಹಳ್ಳಿ ಲೈಫ್ ಸ್ಟೈಲ್ ನೆನಪಿಸುವ ಸುಗ್ಗಿ ಹಬ್ಬಕ್ಕ ಸಾಂಪ್ರದಾಯಿಕ ದಿರಿಸುಗಳಿಗೆ ಆಧುನಿಕ ಸ್ಪರ್ಶ ನೀಡಿರುವ ಬಗೆಬಗೆಯ ವಿನ್ಯಾಸಗಳು ಬಂದಿರುವುದರಿಂದ ಚೆಲುವಾಗಲು ಸಾಕಷ್ಟು ಆಯ್ಕೆಗಳಿವೆ. ವಿನ್ಯಾಸಕಾರರೂ ಎಲ್ಲ ಬಗೆಯ ಫ್ಯಾಷನ್ ಪ್ರಿಯರಿಗೆ ಸರಿಹೊಂದುವಂಥ ವಿವಿಧ ವಿನ್ಯಾಸದ ದಿರಿಸುಗಳನ್ನು ಪರಿಚಯಿಸಿದ್ದಾರೆ.

ಈ ಬಾರಿಯ ಸಂಕ್ರಾಂತಿಗೆ ಗಾಢ ಹಳದಿ, ಕೆಂಪು, ಗುಲಾಬಿ, ನೀಲಿ ಬಣ್ಣಗಳಿಗೆ ಆದ್ಯತೆ ಇರಲಿ. ಸೀರೆ ಮತ್ತು ಲೆಹೆಂಗಾಗಳು ಹಬ್ಬಕ್ಕೆ ಹೇಳಿ ಮಾಡಿಸಿದ ಉಡುಗೆಗಳು. ಇತ್ತೀಚೆಗೆ ಎಲ್ಲೆಲ್ಲೂ ಮೆರೆಯುವುದು ಚೂಡಿದಾರವೇ. ಅದರಲ್ಲಿರುವ ನೂರಾರು ವಿನ್ಯಾಸಗಳು ಹೊಸತನಕ್ಕೆ ಸ್ಪಷ್ಟ ರೂಪ ನೀಡುತ್ತವೆ.

ಅನಾರ್ಕಲಿಗೆ ಈಗ ಎಲ್ಲಿಲ್ಲದ ಬೇಡಿಕೆ. ಕೈಮಗ್ಗದಿಂದ ಮಾಡಿದ ಸಲ್ವಾರ್ ಕಮೀಜ್ಗಳು ಜನಪ್ರಿಯಗೊಳ್ಳುತ್ತಿದ್ದು ಹಬ್ಬಕ್ಕೆ ವಿಶೇಷ ಮೆರುಗು ತಂದುಕೊಡಬಲ್ಲವು. ಚೂಡಿದಾರಕ್ಕೆ ಒಪ್ಪುವಂಥ ವಿವಿಧ ಗಾತ್ರದ ಜಾಕೆಟ್ಗಳನ್ನು ಧರಿಸುವುದೂ ಬಹುಜನಪ್ರಿಯ ಟ್ರೆಂಡ್. ಅದನ್ನೊಮ್ಮೆ ಪ್ರಯತ್ನಿಸಿ ನೋಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version