ಲೈಫ್ ಸ್ಟೈಲ್

ಪೊಂಗಲ್ ಫ್ಯಾಷನ್ ; ಸಂಕ್ರಾಂತಿ ನೈಲ್ ಆರ್ಟ್..!

Published

on

  • ಚಿತ್ರಶ್ರೀ ಹರ್ಷ

2020 ರ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಭಾರತದಲ್ಲಿ ಮನೆ ಮಡಿದ್ದು, ಲೋಹರಿ,ಪೊಂಗಲ್, ಸಂಕ್ರಾಂತಿ ಎಂದು ಬಗೆಯ ಸಾಂಪ್ರದಾಯಿಕ ಆಚರಣೆಗಳನ್ನು ಒಳಗೊಂಡಿದೆ. ನೂತನ ವರ್ಷದ ಮೊದಲ ಹಬ್ಬದ ಸ್ವಾಗತಕ್ಕೆ ಫ್ಯಾಷನ್ ಅಂಗಳದಲ್ಲಿ ನೈಲ್ ಆರ್ಟ್ ರಂಗೋಲಿ, ಸಂಕ್ರಾಂತಿಯ ಸ್ಪೆಷಲ್ ಎನಿಸಿಕೊಂಡಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮನೆಯ ಅಂಗಳದಲ್ಲಿ ನಗುವ ಬಣ್ಣದ ರಂಗೋಲಿ ನೈಲ್ ಆರ್ಟ್ ರೂಪ ತಿಳಿದೆ. ಕೈ ಉಗುರಿನ ಮೇಲೆ ಕ್ರಿಯೇಟಿವ್ ನೈಲ್ ಡಿಸೈನ್ ಮಾಡುವ ಪರಿ ಈಗ ಮಾಮೂಲು. ಇದನ್ನು ಮಾಡಿಸಲು ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ. ಬಣ್ಣ ಗಳ ಮಿಕ್ಸ್ ಮ್ಯಾಚ್ ಟೆಕ್ನಿಕ್ ಹಾಗು ಕ್ರಿಯೇಟಿವ್ ಡ್ರಾಯಿಂಗ್ ನಿಂದ ನೀವೇ  ನೈಲ್ ಆರ್ಟ್ ರಂಗೋಲಿ ಬಿಡಿಸಿ ಹಬ್ಬದ ಸಂಭ್ರಮ ದುಪ್ಪಟ್ಟುಗೊಳಿಸಿ.

ಈಗಂತೂ  ಸಂದರ್ಭಕ್ಕೆ ತಕ್ಕಂತೆ ನೈಲ್ ಆರ್ಟ್ ಟ್ರೆಂಡ್ ಆಗುತ್ತಿದೆ. ಈ ಸಂಕ್ರಾಂತಿ ಸಂಭ್ರಮಕ್ಕೆ ಸಾತ್ ನೀಡಲು ಇದೋ ಬಂದಿದೆ ಪೊಂಗಲ್ ನೈಲ್ ಆರ್ಟ್!  ಇದರ ಒಂದು ಝಲಕ್ ನಿಮಗಾಗಿ  ಇಲ್ಲಿದೆ ನೋಡಿ…

ಪೊಂಗಲ್ ನೈಲ್ ಆರ್ಟ್ !

ಒಂದೊದು ಬೆರಳಿಗೆ ಪೊಂಗಲ್ ಹಬ್ಬ ಸಾರುವ ಒಂದೊಂದು ಸಾಂಕೇತಿಕ  ಚಿತ್ರ ರಚಿಸಲಾಗುತ್ತದೆ. ಪೊಂಗಲ್ ಪಾಟ್ , ಕಬ್ಬು,  ಹಸು, “ಹ್ಯಾಪಿ ಪೊಂಗಲ್ ” ಶುಭಾಶಯಗಳು ಕೋರುವ ನೈಲ್ ಆರ್ಟ್ ಡಿಸೈನ್ ಸದ್ಯ ಸಂಕ್ರಾಂತಿ ಹಬ್ಬಕ್ಕೆಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ಗಾಳಿಪಟ ನೈಲ್ ಆರ್ಟ್ !

ಐದೂ ಬೆರಳಿಗೆ ನೀಲಿ ಆಗಸದ ಬಣ್ಣ ತುಂಬಿ,  ನಡುವಿನ ಎರಡು ಬೆರಳುಗಳ ಮೇಲೆ ಬಣ್ಣದ  ಗಾಳಿಪಟ ನೈಲ್ ಆರ್ಟ್ ಡಿಸೈನ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಸೂರ್ಯೋದಯ ನೈಲ್ ಆರ್ಟ್ !

ಸಂಕ್ರಮಣ ಕಾಲವನ್ನು ಬಿಂಬಿಸುವ ಸೂರ್ಯೋದಯದ  ಕೇಸರಿ- ಕೆಂಪು-ಹಳದಿ- ಕಪ್ಪು  ಕಾಂಬಿನೇಷನ್  ನೈಲ್ ಆರ್ಟ್ ಸಖತ್ ವೈರಲ್ ಆಗಿದೆ.

ರಂಗೋಲಿ ನೈಲ್ ಆರ್ಟ್ !

ಸಂಕ್ರಾಂತಿ ಹಬ್ಬಕ್ಕೂ ರಂಗೋಲಿ ಗೂ ಇರುವ ಅವಿನಾಭಾವ ಸಂಬಂಧ ಹಾರುವ ಕಲರ್ಫುಲ್ ರಂಗೋಲಿ ನೈಲ್ ಆರ್ಟ್ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿರುವುದಂತೂ ಸುಳ್ಳಲ್ಲ.

ಹಾಗಾದರೆ ತಡ ಯಾಕೆ? ಈ ಬಾರಿ ಎಳ್ಳು ಬೀರಲು ಸಿಂಗರಿಸಿಕೊಂಡು ಹೊರಡುವಾಗ, ನಿಮ್ಮ ಉಗುರಿನ ಮೇಲೆ  “ಪೊಂಗಲ್ ಸ್ಪೆಷಲ್ ನೈಲ್ ಆರ್ಟ್” ರಚಿಸಿಕೊಂಡು, ನಿಮ್ಮ ಸಂಕ್ರಾಂತಿಯ ಫ್ಯಾಷನ್ ಸಂಭ್ರಮಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version