ದಿನದ ಸುದ್ದಿ
ಸಂತ ಸಾಹಿತ್ಯ ಅಧ್ಯಯನ ಶಿಬಿರಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ಶಿವಮೊಗ್ಗ : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜುಲೈ ತಿಂಗಳಲ್ಲಿ ‘ಸಂತ ಸಾಹಿತ್ಯ ಅಧ್ಯಯನ ಶಿಬಿರ’ ಎಂಬ ರಾಜ್ಯಮಟ್ಟದ 5 ದಿನಗಳ ಕಮ್ಮಟವನ್ನು ನಡೆಸಲಿದ್ದು, ಈ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿದೆ.
ರಾಜ್ಯದ ಎಲ್ಲಾ ಭಾಗದ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 27 ಕಡೆಯ ದಿನವಾಗಿದ್ದು, ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://sahithyaacademy.karnataka.gov.in ಇಂದ ಪಡೆದುಕೊಳ್ಳಬಹುದೆಂದು ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243