ದಿನದ ಸುದ್ದಿ
ಸಂತೇಬೆನ್ನೂರು | ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ದಕ್ಷ ಪೊಲೀಸ್ ಅಧಿಕಾರಿ ಪಿಎಸ್ ಐ ಶಿವರುದ್ರಪ್ಪ ಮೇಟಿ
ಸುದ್ದಿದಿನ,ಚನ್ನಗಿರಿ/ಸಂತೇಬೆನ್ನೂರು : ದಕ್ಷ ಅಧಿಕಾರಿ ಸಬ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಎಸ್ ಮೇಟಿ ಅವರು ಮಾನವೀಯತೆಯ ಸ್ಪಂದನೆ ಅತ್ಯುತ್ತಮ ಸೇವೆಯಿಂದ ಗುರುತಿಸಿ ಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಂದ ಪ್ರಶಂಸೆಯನ್ನು ಪಡೆದು ಇಲಾಖೆಯಲ್ಲಿ ಮತ್ತು ಸಾರ್ವಜನಿಕರಲ್ಲಿ ಪ್ರೀತಿದಾಯಕರಾಗಿರುವ ಪ್ರಾಮಾಣಿಕ ನಿಷ್ಟ ಅಧಿಕಾರಿ ಎಂದು ಗುರುತಿಸಿಕೊಂಡಿದ್ದಾರೆ.
ಇವರು ದಾವಣಗೆರೆ, ಚನ್ನಗಿರಿ ಪಟ್ಟಣ, ಶಿಗ್ಗಾವಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮತ್ತು ಈಗ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಲ್ಲಿ ಪಿಎಸ್ ಐ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅಕ್ರಮ ಗಾಂಜಾ ಮಾರಾಟಗಾರರನ್ನು , ಕೊಲೆ ಪ್ರಕರಣಗಳು ಕಳ್ಳತನ , ಹಾಗೂ ಕಳ್ಳರನ್ನು ಕೆಲವೆ ದಿನಗಳಲ್ಲಿ ಬೇದಿಸಿ ಮಟ್ಟ ಹಾಕುವ ಚಾಣಕ್ಷತನವನ್ನು ಹೊಂದಿರುವ ಇವರು ತಮ್ಮ 35 ನೇಯ ವರುಷದ ಹುಟ್ಟು ಹಬ್ಬವನ್ನು ಭಾನುವಾರ ಪೋಲಿಸ್ ಠಾಣೆಯಲ್ಲಿ ಸರಳವಾಗಿ ಪೋಲಿಸ್ ಸಿಬ್ಬಂದಿಗಳ ಜೊತೆಯಲ್ಲಿ ಆಚರಿಸಿಕೊಂಡರು.
- ದಕ್ಷ ಅಧಿಕಾರಿಗಳಲ್ಲಿ ಒಬ್ಬರಾಗಿರುವವರು ಶಿವರುದ್ರಪ್ಪ ಎಸ್ ಮೇಟಿ ಹಳೆಯ ಪ್ರಕರಣಗಳ ಆರೋಪಿಗಳನ್ನು ಹುಡುಕಿ , ಬಂದಿಸಿ ಕಡತಗಳನ್ನು ವಿಲೇ ಮಾಡುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಈ ಸಂದರ್ಭದಲ್ಲಿ ಎಎಸ್ಐ ಗಳಾದ ರೇವಣಸಿದ್ದಪ್ಪ , ಓಂಕಾರಪ್ಪ , ರಾಜಪ್ಪ ಸಿಬ್ಬಂದಿಗಳಾದ ಧರ್ಮಪ್ಪ . ಕೊಟ್ರೇಶ್ . ಆಂಜನೇಯ, ನಿಂಗಪ್ಪ, ನಾಗರಾಜ್, ರುದ್ರಸ್ವಾಮಿ, ಸಂತೋಷ್ ಇನ್ನಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243