ಕ್ರೀಡೆ
ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿ: ರಾಜಸ್ತಾನ್ ವಿರುದ್ಧ ಮೇಘಾಲಯಕ್ಕೆ ಗೆಲುವು
ಸುದ್ದಿದಿನ ಡೆಸ್ಕ್ : 75ನೇ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಮೇಘಾಲಯ ತಂಡ ರಾಜಸ್ತಾನ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಕೇರಳದ ಕೊಟ್ಟಪಾಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಅತ್ಯಂತ ಕುತೂಹಲದಿಂದ ಕೂಡಿತ್ತು. ಈ ರಾತ್ರಿ 8ಗಂಟೆಗೆ ಪಾಯೆನಾಡ್ ಕ್ರೀಡಾಂಗಣದಲ್ಲಿ ಆತಿಥೇಯ ಕೇರಳ ಮತ್ತು ಪಶ್ಚಿಮ ಬಂಗಾಳ ತಂಡಗಳು ಪರಸ್ಪರ ಸೆಣಸಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243