ದಿನದ ಸುದ್ದಿ

ದೇಶದ ಕೃಷಿ ವಿಜ್ಞಾನ ಕೇಂದ್ರಗಳಿಗೆ 50 ವರ್ಷ ; ದಾವಣಗೆರೆಯಲ್ಲಿ ಸಸ್ಯ ಸಂತೆ ಆಯೋಜನೆ

Published

on

ಸುದ್ದಿದಿನಡೆಸ್ಕ್:ದೇಶದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಆರಂಭಗೊಂಡ 50 ವರ್ಷ ಪೂರ್ಣಗೊಂಡ ಸುವರ್ಣ ಮಹೋತ್ಸವ ಅಂಗವಾಗಿ ಅಕ್ಟೋಬರ್ 1ಮತ್ತು 2ರಂದು ಎರಡು ದಿನಗಳ ಕಾಲ ದಾವಣಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಸಂತೆ ಮತ್ತು ಸಾವಯವ ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ತೋಟಗಾರಿಕಾ ವಿಜ್ಞಾನಿ ಡಾ.ದೇವರಾಜ್ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಸಸ್ಯ ಸಂತೆ, ವಸ್ತು ಪ್ರದರ್ಶನ ಮತ್ತು ಸಾವಯದ ಪರಿಕರಗಳ” ಮಾರಾಟ ಮೇಳದಲ್ಲಿ ಉತ್ತಮ ಗುಣಮಟ್ಟದ ೫೦ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಮಾರಾಟ, ದೇಸಿ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಕೈತೋಟ ಮತ್ತು ತಾರಸಿ ತೋಟಗಳಿಗೆ ಬೇಕಾಗುವ ಸಲಕರಣೆಗಳು, ಸಾವಯವ ಪರಿಕರ ಗೊಬ್ಬರಗಳ ಮಾರಾಟ, ಸಿರಿಧಾನ್ಯಗಳ ಉಪ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥಗಳ ಮಾರಾಟ ನಡೆಯಲಿದೆ ಎಂದರು.

ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ವತಿಯಿಂದ ಬೆಂಗಳೂರಿನ ಐಸಿಎಂಆರ್-ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣ್ಯ ಸಾವಯವ ಪರಿಕರಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version