/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಮಂಡ್ಯದ ಪಾಲಿಗೆ ಶನಿವಾರ ಕರಾಳ ದಿನ; ಬಸ್ ದುರಂತ, ಹಿರಿಯ ನಟ ಅಂಬರೀಷ್ ಸಾವು

Published

on

ಸುದ್ದಿದಿನ ಮಂಡ್ಯ: ಮಂಡ್ಯ ಜಿಲ್ಲೆಯ ಜನತೆಗೆ ಶನಿವಾರ ಅಕ್ಷರಶಃ ಕರಾಳ ದಿನವಾಗಿ ರಾಚಿದೆ. ಮಂಡ್ಯ ಜಿಲ್ಲೆಯಲ್ಲಿ ಶನಿವಾರ ಎರಡು ದುರಂತಗಳು ಸಂಭವಿಸಿದ್ದು, ಮಧ್ಯಾಹ್ನ ಬಸ್’ವೊಂದು ನಾಲೆಗೆ ಬಿದ್ದು ಮೂವತ್ತಕ್ಕೂ ಅಧಿಕ ಪ್ರಯಾಣಿಕರು ದುರ್ಮರಣ ಹೊಂದಿದರು. ರಾತ್ರಿ ಹತ್ತರ ವೇಳೆಗೆ ಜನರು ಮತ್ತೊಂದು ಕಹಿ ಸುದ್ದಿ ಕೇಳಬೇಕಾಯಿತು. ಮಂಡ್ಯದ ಗಂಡು ಅಂಬರೀಷ್ ಅವರ ಸಾವಿನ ಸುದ್ದಿ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ಇರುವ ವಿಶ್ವೇಶ್ವರಯ್ಯ ನಾಲೆಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ಮೂವತ್ತು ಜನರು ಜಲಸಮಾಧಿಯಾದರು. ಇತ್ತ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಹಿರಿಯ ನಟ ಅಂಬರೀಷ್ ಬದುಕೆಂಬ ಬಣ್ಣದ ಲೋಕದಿಂದ ತೆರೆಮರೆಗೆ ಸರಿದದ್ದು ಇದು ನಿಜಕ್ಕೂ ಮಂಡ್ಯ ಜನರಿಗೆ ಆಘಾತವುಂಟು ಮಾಡಿತು.

ಸಂಚಾರ ಪರವಾನಗಿ ರದ್ದಾಗಿದ್ದ ಹಳೆಯ ಬಸ್: ಮೂಲತಃ ಮಂಗಳೂರಿನ ಪರ್ಮಿಟ್ ಹೊಂದಿದ್ದ ರಾಜಕುಮಾರ ಹೆಸರಿನ ಖಾಸಗಿ ಬಸ್ ಹದಿನೈದು ವರ್ಷಗಳ ಹಳೆಯದು, ಇದರ ಮಾಲಿಕತ್ವದ ಹಿಂದೆ ಒಂದು ರೋಚಕ ಕಥೆಯೇ ಇದೆ. ಮಂಗಳೂರಲ್ಲಿ 15 ವರ್ಷ ಓಡಾಟ ನಡೆಸಿದ್ದ ಬಸ್’ಗೆ ಅಲ್ಲಿನ ಸಾರಿಗೆ ಪರವಾನಗಿ ರದ್ದಾಗಿತ್ತು. ಶಂಕರ ವಿಠಲ ಕಂಪನಿ ಹೆಸರಲ್ಲಿ 2001 ಏ.1ರಂದು ನೋಂದಣಿಯಾಗಿದ್ದ ಬಸ್’ಗೆ ಮೊದಲು ಎಂಟು ಜನರು ಮಾಲಿಕರಿದ್ದರು. ಸದ್ಯ ಮಂಡ್ಯದ ಶ್ರೀನಿವಾಸ್ ಅವರು ಮಾಲಿಕರಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version