ದಿನದ ಸುದ್ದಿ

ಸೂಳೆಕೆರೆ ಉಳಿಸಿ ಅಭಿಯಾನ : ನಾಳೆ ಖಡ್ಗ ಸಂಘದಿಂದ ಪಾದಯಾತ್ರೆ

Published

on

ಸುದ್ದಿದಿನ ಡೆಸ್ಕ್ : ನಾಳೆ (ಜೂನ್ 16) ಸೂಳೆಕೆರೆ ಉಳಿಸಿ ಅಭಿಯಾನದಡಿಯಲ್ಲಿ ಖಡ್ಗ ಸ್ವಯಂಸೇವಕರ ಸಂಘವು ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

ಸೂಳೆಕೆರೆಯಿಂದ ಬೆಳಗ್ಗೆ 11ಗಂಟೆಗೆ ಆರಂಭಿಸಿ ಪಾಂಡೊಮಟ್ಟಿಯ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿ, ಕೇದಾರ ಮಠದ ಶ್ರೀ ಶಾಂತವೀರ ಶಿವಾಚಾರ್ಯ ಅವರನ್ನು ಭೇಟಿ ಮಾಡಿ ನಲ್ಲೂರಿನ ತನಕ ಪಾದಯಾತ್ರೆ ಮಾಡಿ, ನಂತರ‌ ಅಲ್ಲೇ ಉಳಿದುಕೊಳ್ಳಲಾಗುವುದು‌‌ ನಂತರ ಭಾನುವಾರ (ಜೂನ್ 17) ಬೆಳಗ್ಗೆ ‌7 ಗಂಟೆಗೆ ಪಾದಯಾತ್ರೆಯನ್ನು ಶ್ರೀ ಶಾಂತವೀರ ಶಿವಾಚಾರ್ಯರ ಕೇದಾರ ಮಠಕ್ಕೆ ಭೇಟಿ‌ ನೀಡಿ ಅಂತಿಮಗೊಳಿಸಲಾಗುವುದೆಂದು
ಎಂದು ಖಡ್ಗ ಸಂಘ ಪ್ರಕಟಣೆಯಲ್ಲಿ‌ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version