ದಿನದ ಸುದ್ದಿ
ಅವಹೇಳನಕಾರಿ ಹೇಳಿಕೆ ; ಲೋಕಿಕೆರೆ ನಾಗರಾಜ್ ಕೂಡಲೇ ಕ್ಷಮೆ ಕೇಳಬೇಕು : ಸವಿತಾ ಹುಲ್ಲುಮನೆ ಗಣೇಶ್ ಆಗ್ರಹ
ಸುದ್ದಿದಿನ,ದಾವಣಗೆರೆ:ಲೋಕೀಕೆರೆ ನಾಗರಾಜ್ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಅವರು ಆಗ್ರಹಿಸಿದ್ದಾರೆ.
ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಲೋಕೀಕೆರೆ ನಾಗರಾಜ್ ರವರು ಈ ಕೂಡಲೇ ಕ್ಷಮೆ ಯಾಚಿಸಬೇಕು , ಎಸ್ ಎಸ್ ಮಲ್ಲಿಕಾರ್ಜುನ್ ರವರ ಕೃಪೆಯಿಂದಲೇ ರಾಜಕೀಯ ಪ್ರಾರಂಭಿಸಿದ ನಾಗರಾಜ್ ರವರು ಇಂದು ಅವರ ವಿರುದ್ದ ಮಾತನಾಡಿರುವುದು ಖಂಡನೀಯ ಎಂದಿದ್ದಾರೆ.
ದಾವಣಗೆರೆಯನ್ನ ಕರ್ನಾಟಕವೇ ನೋಡುವಂತೆ ಅಭಿವೃದ್ಧಿ ಪಡಿಸಿದ್ದು ಮಾನ್ಯ ಸಚಿವರಾದ ಮಲ್ಲಿಕಾರ್ಜುನ್. 2023 ರಲ್ಲಿ ಸಚಿವರಾದ ದಿನದಿಂದಲೂ ಸಹ ಅವಿರತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಹಿಂದೆ ಬಿ ಜೆ ಪಿ ಅವಧಿಯಲ್ಲಿ ಸಿ ಜಿ ಆಸ್ಪತ್ರೆ ಅಭಿವೃದ್ದಿಯನ್ನ ಯಾಕೆ ಮಾಡಲಿಲ್ಲ? ಅವತ್ತು ಯಾಕೆ ಪ್ರಶ್ನೆ ಮಾಡಲಿಲ್ಲ ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸಚಿವರ ನೇತೃತ್ವದಲ್ಲಿ ಈಗಾಗಲೇ ಆಸ್ಪತ್ರೆಯ ಅಭಿವೃದ್ಧಿಗೆ ಹಲವು ಕಾಮಗಾರಿಗಳು ನೆಡೆದಿದ್ದು ಹೆಚ್ಚಿನ ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಲಾಗಿದೆ. ಬಡವರ ಪರವಾದ ಅವರ ನಿರ್ದಾರಗಳಿಂದಲೇ ದಾವಣಗೆರೆಯ ಜನರು ಅವರನ್ನು ಪ್ರೀತಿಯ ಮಗನಾಗಿ, ಅಣ್ಣನಾಗಿ ಗೌರವಿಸುತಿದ್ದಾರೆ. ಮುಂದಿನ 25 ವರ್ಷಗಳ ದೂರದೃಷ್ಠಿ ಯೋಚಿಸಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ ಕೀರ್ತಿ ನಮ್ಮ ಸಚಿವರದ್ದು. ಅಂತೆಯೇ ಅವರ ಯೋಜನೆಗಳ ಮತ್ತು ಅಭಿವೃದ್ಧಿ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಮ್ಮ ಸಂಸದರು ಕ್ರಿಯಾಶೀಲ ವಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ ಎಂದರು.
ಒಬ್ಬ ಸಂಸದರ ಕಾರ್ಯವೈಖರಿ ಬಗ್ಗೆ ಹೀಯಾಳಿಸಿ ಮಾತನಾಡಿರುವುದು ಅವರಿಗೆ ಅಷ್ಟೇ ಅಲ್ಲ ಎಲ್ಲಾ ಮಹಿಳೆಯರಿಗೆ ಅಪಮಾನಿಸಿದಂತೆ. ಒಬ್ಬ ಮಹಿಳಾ ಸಂಸದೆಯಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಾಶ್ವತ ಪರಿಹಾರ ಕ್ಕೆ ಯೋಜನೆಗಳನ್ನು ರೂಪಿಸಿರುವ ಅವರನ್ನು ಅಭಿನಂದಿಸಬೇಕು. ಅದರೆ ಅವರು ಪತ್ರಿಕಾ ಗೋಷ್ಠಿ ನಡೆಸಿ ಹಗುರವಾಗಿ ಮಾತನಾಡಿರುವುದು ಅವರ ದಿವಾಳಿತನವನ್ನು ಮತ್ತು ಮಹಿಳಾ ವಿರೋಧಿ ನಿಲುವನ್ನು ಪ್ರದರ್ಶಿಸುತ್ತದೆ. ಈ ಕೂಡಲೇ ಅವರು ಸಚಿವರಲ್ಲಿ ಹಾಗೂ ಸಂಸದರಲ್ಲಿ ಕ್ಷಮೆ ಯಾಚಿಸಬೇಕು ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಅವರು ಆಗ್ರಹಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243