ದಿನದ ಸುದ್ದಿ
ನಕಲಿ ಜಾತಿ ಪ್ರಮಾಣ ಪತ್ರ ; ಮಾಯಕೊಂಡ ಪಕ್ಷೇತರ ಅಭ್ಯರ್ಥಿ ಪುಷ್ಪ ವಾಗೀಶ್ ನಾಮಪತ್ರ ತಡೆಹಿಡಿಯಲು ರಾಜ್ಯಪಾಲರಿಗೆ ಪತ್ರ
ಸುದ್ದಿದಿನ,ದಾವಣಗೆರೆ : ಬಿ.ಎಂ. ವಾಗೀಶ್ ಹಾಗೂ ಅವರ ಕುಟುಂಬದವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ಪರಿಶಿಷ್ಟ ಜನಾಂಗದವರ ಸೌಲಭ್ಯಗಳನ್ನು ಕಬಳಿಸುವ ಜೊತೆಗೆ ಜಾತಿ ಜಾತಿಗಳ ನಡುವೆ ವೈದ್ಯಯ್ಯದ ವಿಷ ಬೀಜ ಬಿತ್ತುತ್ತಿರುವ ಇವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಸಂಚಾಲಕ ಹೆಚ್.ಮಲ್ಲೇಶ್ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಗೀಶ್ ಸೇರಿದಂತೆ ಕುಟುಂಬದ ಸದಸ್ಯರುಗಳಾದ ಬಿ.ಎಂ. ಪುಷ್ಪ ಬಿ.ಎಂ, ಅಮೂಲ್ಯ, ಬಿ.ಎಂ. ಆದರ್, ಬಿ.ಎಂ. ಚನ್ನೇಶ್, ಅನನ್ಯ, ಬಿ.ಎಂ. ಲಕ್ಷ್ಮೀ ಅವರು ಲಿಂಗಾಯತ ಸಮಾಜಕ್ಕೆ ಸೇರಿದವರಾಗಿದ್ದು, ದುರ್ಲಾಭಕ್ಕಾಗಿ ಬೇಡ ಜಂಗಮ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿದರು.
ಮಾಯಕೊಂಡ ಮೀಸಲು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಪ್ರಚಾರ ಮಾಡಿದ್ದು, ಕೊನೆಗೆ ನಾಮಪತ್ರ ರದ್ದುಗೊಳಿಸಲಾಗಿದೆ. ಅದರೆ ಅವರು ಪತ್ನಿ ಪುಷ್ಪ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗಿದೆ. ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾರುವುದು ಸಾಬೀತಾಗಿದೆ ಎಂದರು.
ಪುಷ್ಪ ಅವರ ನಾಮಪತ್ರಕ್ಕೆ ತಕರಾರು ಅರ್ಜಿ
ಸಲ್ಲಿಸಿದ್ದು, ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸಿ, ನಾಮಪತ್ರ ತಡೆ ಹಿಡಿಯಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ ಎಂದರು.
ಚಿನ್ನಸಮುದ್ರ ಶೇಖರ್ ನಾಯ್ಕ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆದವರು ಚುನಾವಣೆಗೆ ನಿಂತು, ಸಭೆ ಸಮಾರಂಭ ನಡೆಸುತ್ತಿದ್ದರೂ ಜಿಲ್ಲಾಡಳಿತ ಸುಮ್ಮನಿರುವುದು ನೋಡಿದರೆ, ಜಿಲ್ಲಾಡಳಿತವೂ ಅವರ ಪರ ನಿಂತು – ಸಹಾಯ ಮಾಡುತ್ತಿದೆ ಎನಿಸುತ್ತದೆ ಎಂದು ಆರೋಪಿಸಿದರು.
ಏ.18 ರಂದೇ ಬೆಂಗಳೂರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ – ಎಡಿಜಿ ಮಾಯಕೊಂಡ ಆರ್ ಒ ಅವರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತಕ್ಕೂ ನಕಲಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿದೆ ಎಂದು ಪತ್ರ ಬರೆಯಲಾಗಿದೆ, ಆದರೂ ಜಿಲ್ಲಾಡಳಿತ ಎಲ್ಲವನ್ನೂ ಸುಮ್ಮನೆ ಕುಳಿತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ನಾಳೆ ಬೆಂಗಳೂರಿಗೆ ನಿಯೋಗದೊಂದಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಹಾಗೂ ಎಸ್ಸಿ ಎಸ್ಟಿ ವಿಭಾಗದ ಅಧಿಕಾರಿಗಳಿಗೆ, ಸರರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗುವುದು. ಕ್ರಮ ಕೈಗೊಳ್ಳದಿದ್ದರೆ ವಿಧಾನ ಸೌಧದ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಣ್ಣಪ್ಪ ತಣಿಗೆರೆ, ಸೋಮಶೇಖರ್, ಚಂದ್ರಪ್ಪ ಕಂದಗಲ್ಲು, ಲಕ್ಷ ಣ ರಾಮಾವತ್’ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243