ದಿನದ ಸುದ್ದಿ

ವಿದ್ಯಾರ್ಥಿವೇತನ | ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಮಡಿಕೇರಿ : ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಂದ 2021-22ನೇ ಸಾಲಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ (ಎಸ್‍ಎಸ್‍ಪಿ) ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎನ್‍ಎಸ್‍ಪಿ ಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಎಸ್‍ಎಸ್‍ಪಿ ಪೂರ್ಟಲ್ https://ssp.postmatric.karnataka.gov.in ಅಡಿಯಲ್ಲಿ ಅರ್ಜಿ ಸಲ್ಲಿಸುವುದು (ರಿನೀವಲ್ ಮತ್ತು ಪ್ರೆಸ್‍ರ್) ಕಡ್ಡಾಯವಾಗಿದ್ದು ಅರ್ಜಿ ಸಲ್ಲಿಸಲು ಏಪ್ರಿಲ್, 30 ಕೊನೆಯ ದಿನವಾಗಿದೆ.

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‍ಸೈಟ್ https://dom.karnataka.gov.in/kodagu/public ಅಥವಾ ಸಹಾಯವಾಣಿ ಸಂಖ್ಯೆ 8277799990 ಗೆ ಅಥವಾ ತಾಲೂಕು ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಬಹುದು.

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ ಕಾಲೇಜು ಹತ್ತಿರ, ಮಡಿಕೇರಿ: 571201. ದೂ.ಸಂ. 08272-225528/ 220214. ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಪಂಚಾಯತ್ ಕಚೇರಿ ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು ದೂ.ಸಂ.9900731037. ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲ್ಲೂಕು ಪಂಚಾಯತ್ ಕಟ್ಟಡ, ಸೋಮವಾರಪೇಟೆ, ದೂ.ಸಂ.8548068519 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಮತ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version