ದಿನದ ಸುದ್ದಿ

ಶಿಕ್ಷಣ ಇಲಾಖೆಯಿಂದ ಮಲೇಬೆನ್ನೂರು ರಾಜ ರಾಜೇಶ್ವರಿ ಪ್ರೌಢ ಶಾಲೆಗೆ ಸನ್ಮಾನ

Published

on

ಸುದ್ದಿದಿನ,ದಾವಣಗೆರೆ : ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಂದು ನಡೆದ ಕಾರ್ಯಕ್ರಮದಲ್ಲಿ 2021 – 22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿರುವ ಮಲೇಬೆನ್ನೂರು ಜಿಗಳಿ ರಸ್ತೆಯ ಒಡೆಯರ್ ಬಸಾಪುರ ಗ್ರಾಪಂ ವ್ಯಾಪ್ತಿಯ ರಾಜ ರಾಜೇಶ್ವರಿ ಪ್ರೌಢ ಶಾಲೆಗೆ ಗೌರವ ಸನ್ಮಾನದೊಂದಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ ರಾಜೇಶ್ವರಿ ಪ್ರೌಢಶಾಲೆಯ ಪರವಾಗಿ ಶಿಕ್ಷಕಿ ಕವಿತಾ ಕೊಮಾರನಹಳ್ಳಿ ಅವರು ಸನ್ಮಾನ ಸ್ವೀಕರಿಸಿದರು.

ಗೌರವ ಸನ್ಮಾನದೊಂದಿಗೆ ಅಭಿನಂದಿಸಿರುವ ದಾವಣಗೆರೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಸ್ಥೆಯ ಕಾರ್ಯದರ್ಶಿ ಜಿ.ಬಿ ಶಿವಾನಂದಪ್ಪ, ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಮುಖ್ಯೋಪಾಧ್ಯಾಯರಾದ ಶಶಿಧರ ಎಸ್, ಶಿಕ್ಷಕರು, ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಈ ಮೂಲಕ ವಂದನೆ ಸಮರ್ಪಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version