ದಿನದ ಸುದ್ದಿ
ಫೇಸ್ ಬುಕ್ ಪೋಸ್ಟ್: ಪವನಜಗೆ ಲೆಫ್ಟ್ ರೈಟ್
ಎನ್ ಮಹೇಶ್ ಅವರ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಯಾವ ಜಾತಿ ಮಕ್ಕಳು ಎಷ್ಟು ಪುಸ್ತಕ ತೆಗೆದುಕೊಂಡು ಹೋಗಬೇಕೆಂಬ ವಿಜ್ಞಾನ ಬರಹಗಾರ ಪವನಜ ಅವರ ಫೇಸ್ ಬುಕ್ ಪೋಸ್ಟ್ ವಿವಾದ ಹುಟ್ಟುಹಾಕಿದೆ.
ಸುದ್ದಿದಿನ ಡೆಸ್ಕ್: ವಿಜ್ಞಾನ ಬರಹಗಾರ ಯು.ಬಿ. ಪವನಜ ಅವರ ಫೇಸ್ಬುಕ್ ಪೋಸ್ಟ್ ವೊಂದು ಭಾರಿ ವಿವಾದ ಹುಟ್ಟುಹಾಕಿದ್ದು, ಬ್ರಾಹ್ಮಣವಾದದ ಕುರಿತು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಶಿಕ್ಷಣ ಸಚಿವ ಎನ್. ಮಹೇಶ್ ಅವರು ಓಪನ್ ಬುಕ್ ಟೆಸ್ಟ್ ಅಥವಾ ತೆರೆದ ಪುಸ್ತಕ ಪರೀಕ್ಷೆ ಕುರಿತ ಚಿಂತನೆಯನ್ನು ಹೀಯಾಳಿಸಿ ಪವನಜ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
ತೆರೆದ ಪುಸ್ತಕ ಪರೀಕ್ಷೆಯಲ್ಲಿ ಯಾವ ಜಾತಿಯ ಮಕ್ಕಳು ಎಷ್ಟು ಪುಸ್ತಕ ತೆಗೆದುಕೊಂಡು ಹೋಗಬೇಕು ಎಂಬ ಕುರಿತ ಪೋಸ್ಟ್ ಇದಾಗಿದೆ. ಪವನಜ ಅವರ ಈ ಪೋಸ್ಟ್ ಗೆ ಋಣಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿಂದೆಯೇ ಈ ಪೋಸ್ಟ್ ಡಿಲಿಟ್ ಆಗಿದೆ.
ಸದ್ಯ ರಾಜ್ಯದ ಗೌರವಾನ್ವಿತ ಪ್ರಜಾವಾಣಿ ಪತ್ರಿಕೆಯ ಅಂಕಣಕಾರರೂ ಆಗಿರುವ ಪವನಜ ಅವರ ಅಂಕಣವನ್ನು ಈ ಕೂಡಲೇ ನಿಲ್ಲಿಸಬೇಕೆಂಬ ಒತ್ತಾಯಗಳೂ ಕೇಳಿಬರುತ್ತಿವೆ.
ಪವನಜ ಅವರ ಪೋಸ್ಟ್ ಕುರಿತು ವ್ಯಕ್ತವಾಗಿರುವ ಕಮೆಂಟ್ ಗಳು ಇಲ್ಲಿವೆ.
ಇಂಥಹವರೆ ಸಮಾಜದಲ್ಲಿ ಮೀಸಾಲಾತಿ ಬಗ್ಗೆ ತಪ್ಪು ತಪ್ಪು ಸಂದೇಶಗಳನ್ನು ಜಾತಿ ಜಾತಿ ಮಧ್ಯೆ ಬಿತ್ತಿ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳುತ್ತಿರುವವರು , ಹುಟ್ಟುಗುಣ ಈ ಸನಾತನಿ ಮನುವಾದಿಗಳಿಂದ ಹೋಗಲ್ಲ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ನೀಚರು ಇವರು.
ಜನರಲ್ ಕೆಟಗರಿಗೂ ಬಾರದ ಶ್ರೇಷ್ಠತಮವಾದ ‘ಮೂರನೇ ದರ್ಜೆಯ ಬ್ರಾಹ್ಮಣ್ಯ’!
ಮನುವಾದಿ ಕೋಟಾದಲ್ಲಿ ಅಂಕಣಾವಕಾಶ ಸಿಕ್ಕಿರಬೇಕು
ಕಾನೂನಿನಲ್ಲಿ ಎಷ್ಟೊಂದು ಮೀಸಲಾತಿ ಇದ್ದರು ಕೂಡ ಬ್ರಾಹ್ಮಣರ ಸರಕಾರಿ ಹುದ್ದೆಗಳು 75%ರಷ್ಟು ಪಡೆಯಲು ಹೇಗೆ ಸಾದ್ಯವಾಯಿತು ಎಂದು ಕೊರಳು ಪಟ್ಟಿಹಿಡಿದು ಕೇಳಬೇಕು ಪವನಜನಿಗೆ.
ಇವತ್ತು ಬ್ರ್ಹೇಮೀನ್ ಗಳು ಅತಿ ಹೆಚ್ಚು ಸುಳ್ಳು ಹೇಳುವ, ಆಲಿಸುವ, ಚರ್ಚಿಸುವ ಮತ್ತು ವ್ಯಾಖ್ಯಾನಿಸುವ ಕೀಳು ಹಂತಕ್ಕೆ ಕುಸಿದಿದ್ದಾರೆ. ಕೇಂದ್ರ ಸಂಪುಟದಲ್ಲಿ ಶೇಕಡಾ 85 ಅವಕಾಶ ಸಿಕ್ಕಿರುವುದೇ ಕಾರಣವಿರಬೇಕು.