ದಿನದ ಸುದ್ದಿ
ದಾವಣಗೆರೆ | ದ್ವಿದಸ-ಪರಿಚಾರಕ ಹುದ್ದೆಗಳ ಜೇಷ್ಟತಾ ಪಟ್ಟಿ ಪ್ರಕಟ : ಆಕ್ಷೇಪಗಳ ಆಹ್ವಾನ
ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ದ್ವಿತೀಯ ದರ್ಜೆಯ ಸಹಾಯಕರು, ದ್ವಿ ದ ಸ ಸಹಿತ ಬೆರಳಚ್ಚುಗಾರರು ಹಾಗೂ ಅರ್ಹ ಪರಿಚಾರಕರ ಹುದ್ದೆಗೆ ಬಡ್ತಿ ನೀಡಲು ಪರಿಚಾರಕರ ಹಾಗೂ ಡಿ ದರ್ಜೆ ನೌಕರರ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಿದೆ.
ಅದರನ್ವಯ ಸರ್ಕಾರಿ ಪ್ರೌಢಶಾಲೆಗಳಲ್ಲಿ/ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಚಾರಕರು, ಡಿ ದರ್ಜೆ ನೌಕರರು ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು 7 ದಿನಗಳೊಳಗೆ ಸಕ್ಷಮ ಪ್ರಾಧಿಕಾರದ ಮುಖಾಂತರ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243