ದಿನದ ಸುದ್ದಿ
ಅರಮನೆ ಎದುರು ಕಬೂತರ್ ದಾನ್ ಹಿಂದಿನ ಮರ್ಮ
ಸುದ್ದಿದಿನ ಡೆಸ್ಕ್: ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪ್ರತಿದಿನ ಬೆಳಗ್ಗೆ ಪಾರಿವಾಳಗಳಿಗೆ ಭರ್ಜರಿ ಭೋಜನ ಸಿಗುತ್ತೆ. ಜೋಳ, ಕಡಲೆ, ಬಿಸ್ಕತ್ತುಗಳನ್ನು ಸಾವಿರಾರು ಪಾರಿವಾಳಗಳಿಗೆ ಉಣಬಡಿಸಲಾಗುತ್ತದೆ. ಕಬೂತರ್ ದಾನ್ ಎನ್ನುವ ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವ ಜೈನ ಸಮುದಾಯದವರು ಸಾವಿರಾರು ರೂಪಾಯಿಯ ಕಾಳುಗಳನ್ನು ದೇಣಿಗೆಯಾಗಿ ನೀಡುತ್ತಾರೆ.
ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ನೋಡಿ ಈ ಕಬೂತರ್ ಗಳು ಕೃತಕವಾಗಿ ನೀಡುವ ಕಾಳು, ಬಿಸ್ಕತ್ತುಗಳನ್ನು ತಿಂದು ದಡೂತಿಯಾಹಿವೆ. ಎಷ್ಟರ ಮಟ್ಟಿಗೆ ಅವು ದಪ್ಪ ಆಗಿವೆ ಎಂದರೆ ಒಮ್ಮೊಮ್ಮೆ ಹತ್ತಾರು ಬಾರಿ ಪಟ ಪಟ ರೆಕ್ಕೆ ಬಡಿದರೂ ಮೇಲೆ ಹಾರಲಾರವು.
ಈ ಪಾರಿವಾಳ ಗಳು ನೈಸರ್ಗಿಕವಾಗಿ ಆಹಾರ ಹುಡುಕಿ ತಿನ್ನುವುದನ್ನು ಬಿಟ್ಟುಬಿಟ್ಟಿವೆ. ರಸವತ್ತಾದ ಕವಳ ಸಿಗುತ್ತದೆ ಎಂಬ ಕಾರಣಕ್ಕೆ ಈ ಪಾರಿವಾಳಗಳು ಅರಮನೆಯ ಪ್ರವೇಶ ದ್ವಾರ ಮೊದಲಾದ ಕಡೆ ಗೂಡು ಕಟ್ಟಿಕೊಂಡು ವಾಸವಾಗಿವೆ. ಪಾರವಾಳದ ಹಿಕ್ಕೆಗಳಲ್ಲಿರುವ ಆಸಿಡ್ ಅಂಶದಿಂದ ಪಾರಂಪರಿಕ ಕಟ್ಟಡಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುತ್ತಿದ್ದಾರೆ ತಜ್ಞರು.