ದಿನದ ಸುದ್ದಿ
ರೈತರು ಪರಿಹಾರ ಕೇಳಿದ್ದಕ್ಕೆ 144 ಸೆಕ್ಷನ್ ಜಾರಿ..!
ಸುದ್ದಿದಿನ,ಗೌರಿಬಿದನೂರು : ಪವರ್ ಗ್ರೀಡ್ ನಿಂದ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತರು ಉಪವಾಸ ಸತ್ಯಾಗ್ರಹವನ್ನು ಗೌರಿಬಿದನೂರು ತಾಲೂಕು ಕಚೇರಿ ಎದುರು ಮಾಡಿದರು.
ಈ ಹೋರಾಟ ಹತ್ತಿಕ್ಕಿದ್ದ ಪೊಲೀಸರು, ಗೌರಿಬಿದನೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಮಾಡಿದ್ದಾರೆ. ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಆದೇಶ ಹೊರಡಿಸಿದ್ದು, ಫೆಬ್ರವರಿ 25 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಟವರ್ ನಿರ್ಮಿಸಿರುವ ಜಮೀನಿಗೆ 2.25 ಲಕ್ಷದಿಂದ 4 ಲಕ್ಷ ಪವರ್ ಗ್ರಿಡ್ ನ್ ಪರಿಹಾರ ಹಾಗೂ ಟವರ್ ಜಾಗಕ್ಕೆ 8ರಿಂದ 13 ಲಕ್ಷ ನೀಡುವಂತೆ ರೈತರು ಆಗ್ರಹಿಸಿದ್ದರು. ಲೈನ್ ಕಾರಿಡಾರ್ ಗೆ ಒಂದು ಎಕರೆಗೆ 2ಲಕ್ಷ ಪರಿಹಾರ ಪವರ್ ಗ್ರಿಡ್ ನಿಂದ ಹಾಗೂ 5.25ಲಕ್ಷ ಪರಿಹಾರ ನೀಡುವಂತೆ ರೈತರ ಹೊರಾಟ ನಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401