/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಹಿರಿಯೂರು : ವೈಜ್ಞಾನಿಕ ಮನೋವೃತ್ತಿ ಸಂವಹನಕಾರರ ಸಬಲೀಕರಣ ಶಿಬಿರ

Published

on

ಸುದ್ದಿದಿನ,ಹಿರಿಯೂರು : ಕರ್ನಾಟಕ ಅಕಾಡೆಮಿಕ್ ಆಫ್ ಮ್ಯಾಥಮಿಟಿಕ್ಸ್ ಚಳ್ಳಕೆರೆ ಮತ್ತು ಶ್ರೀ ಗಿರೀಶ ಶಿಕ್ಷಣ ಮಹಾವಿದ್ಯಾಲಯ ಹಿರಿಯೂರುಇವರ ಸಹಯೋಗದಲ್ಲಿ ಇಂದು “ವೈಜ್ಞಾನಿಕ ಮನೋವೃತ್ತಿ ಸಂವಹನಕಾರರ ಸಬಲೀಕರಣ ಶಿಬಿರ” ಹಿರಿಯೂರಿನ ಗಿರೀಶ ಬಿ,ಇಡಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾದ ಶ್ರೀ ಎಂ ಅಬ್ದುಲ್ ರೆಹಮಾನ್ ಪಾಷ, ಅವರು ಸಂವಹಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡುವ ಮೂಲಕ ಮೂಢನಂಬಿಕೆ ಒಂದು ಭಾವನೆ, ಪರಮಾಣು, ಗೆಲಾಕ್ಸಿ, ಏಕ ಕೋಶ ಜೀವಿ, ವಿದ್ಯಾಮಾನಗಳು ನಿಯಮ ಬದ್ದವಾಗಿವೆ, ಎಲ್ಲವನ್ನು ತಾರ್ಕಿಕವಾಗಿ, ವಿಮರ್ಶಾತ್ಮವಾಗಿ ಆಲೋಚಿಸಿ ಪ್ರಯೋಗದ ಮೂಲಕ ಪರಿಶೀಲಿಸಿ ತೀರ್ಮಾನವನ್ನು ಒಪ್ಪಿಕೊಳ್ಳುವುದು, ಜಗತ್ತಿನಲ್ಲಿ ಕಾರ್ಯಕಾರಣ ಸಂಬಂಧ ಇರುವುದು ವೈಜ್ಞಾನಿಕ ಮನೋವೃತ್ತಿಯನ್ನು ರೂಢಿಸಿಕೊಳ್ಳಲು ವಿವಿಧ ಪ್ರಯೋಗಗಳ ಮೂಲಕ ಉಪನ್ಯಾಸವನ್ನು ಪ್ರತ್ಯಕ್ಷಿಕೆ ಮೂಲಕ ವಿವರಿಸಿದರು.

ಅಧ್ಯಕ್ಷತೆಯನ್ನು ಶ್ರೀ ಮತಿ ಸುಧಾ ಎಂ ಎ, ಪ್ರಾಂಶುಪಾಲರು ಗಿರೀಶ ಶಿಕ್ಷಣ,
ಮಹಾವಿದ್ಯಾಲಯ ಹಿರಿಯೂರು ವಹಿಸಿದ್ದರು, ಉದ್ಘಾಟನೆ ಯನ್ನು ಶ್ರೀ ಹೆಚ್ ಮಂಜುನಾಥ ಸಂಚಾಲಕರು ಕರ್ನಾಟಕ ಅಕಾಡೆಮಿ ಆಫ್ ಮ್ಯಾಥಮೆಟಿಕ್ಸ್ ಚಳ್ಳಕೆರೆ ಇವರು ಮಾಡಿದರು.

ವಿಶೇಷ ಆಹ್ವಾನಿತರು – ಶ್ರೀ ಎಂ ಅಬ್ದುಲ್ ರೆಹಮಾನ್ ಪಾಷ ಕಾರ್ಯಕ್ರಮದ ರುವಾರಿಗಳು, ಸಂವಹನಕಾರರು ಮತ್ತು ಭಾರತೀಯ ಭಾಷಾ ಸಂಸ್ಥೆ ಮೈಸೂರು.

ಉಪಸ್ಥಿತಿ – ರಘು ಎಲ್, ಶಾಂತಮೂರ್ತಿ ಇ, ಎಸ್ ನಿಜಲಿಂಗಪ್ಪ, ಲೋಕೆಶ್ ಎಂ, ರಾಜೇಂದ್ರ ಪ್ರಸಾದ್ ಜಿ ಎಸ್, ವಿಜಯ ಶ್ರೀ, ವಿರಣ್ಣ ಪಿ, ನಯೀಮುದ್ದೀನ್, ನಾಗರಾಜ, ಪ್ರಕಾಶ್ ಮತ್ತು ಬಿ, ಇಡಿ ಪ್ರಶಿಕ್ಷಣಾರ್ಥಿಗಳು

ಸ್ವಾಗತ ವನ್ನು ಅನಿತ ದ್ವಿತೀಯ ಬಿ,ಇಡಿ ಪ್ರಶಿಕ್ಷಣಾರ್ಥಿ,ನಿರೂಪಣೆ – ರಶ್ಮಿ ದ್ವಿತೀಯ ಬಿ,ಇಡಿ ಪ್ರಶಿಕ್ಷಣಾರ್ಥಿ, ವಂದನಾರ್ಪಣೆ – ಮಂಜುಳ ದ್ವಿತೀಯ ಬಿ,ಇಡಿ ಪ್ರಶಿಕ್ಷಣಾರ್ಥಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version