ದಿನದ ಸುದ್ದಿ

ಮೂವರು ಮಹಿಳೆಯರು ಸೇರಿ ಏಳು ನಕ್ಸಲರ ಸಾವು

Published

on

ಚತ್ತೀಸಗಡದಲ್ಲಿ ನಕ್ಸಲ್ ವಿರುದ್ಧದ ಗುಂಡಿನ ದಾಳಿ

ಸುದ್ದಿದಿನ ಡೆಸ್ಕ್| ದಕ್ಷಿಣ ಚತ್ತೀಸಗಡದ ಬಸ್ತಾರ್ ವಲಯದ ದಟ್ಟಾರಣ್ಯದಲ್ಲಿ ಗುರುವಾರ ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಏಳು ಮಾವೊಯಿಸ್ಟ್ ಗಳು ಮೃತಪಟ್ಟಿದ್ದಾರೆ.

ಚತ್ತೀಸಗಡದ ಕಲಹ ಪೀಡಿತ ಜಿಲ್ಲೆಗಳಾದ ದಂತೇವಾಡ್ ಮತ್ತು ಬಿಜಾಪುರದ ಗಡಿಭಾಗದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಮತ್ತು ಜಿಲ್ಲಾ ಮೀಸಲು ಭದ್ರತಾ ಪಡೆಯ (DRG) ಜಂಟಿ ಕಾರ್ಯಾಚರಣೆ ನಡೆಸಿದೆ. ಎರಡು ಜಿಲ್ಲೆಗಳ ಗಡಿಗ್ರಾಮಗಳಾದ ತಿಮಿನಾರ್ ಮತ್ತು ಪುಸನಾರ್ ಗ್ರಾಮಗಳ ಗಡಿಯಲ್ಲಿ ಅವಿತುಕೊಂಡಿದ್ದ ನಕ್ಸಲರಿಗಾಗಿ ಹುಡುಕಾಟ ನಡೆದಿತ್ತು.

ಮೂವರು ಮಹಿಳೆಯರು ಸೇರಿ ಏಳು ನಕ್ಸರು ಭದ್ರತಾ ಸಿಬ್ಬಂದಿ ಗುಂಡೇಟಿಗೆ ಬಲಿಯಾಗಿದ್ದಾರೆ. ಮೃತದೇಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಅರಣ್ಯದೊಳಗೆ ಇರುವುದರಿಂದ ಹೆಚ್ಚಿನ ಮಾಹಿತಿ ತಿಳಿದು ಬರುತ್ತಿಲ್ಲ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ತಿಳಿಸಿದ್ದಾರೆ. ಹೆಚ್ಚಿನ ಭದ್ರತಾ ಪಡೆಯನ್ನು ಅರಣ್ಯ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭದ್ರತಾ ಪಡೆಯು ಎರಡು ಇನ್ಸಾಸ್ ರೈಫಲ್, ಎರಡು 303 ರೈಫಲ್ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ 67 ಮಾವುಯಿಸ್ಟ್ ಗಳ ಹತ್ಯೆಯಾಗಿದೆ. ಚತ್ತೀಸಗಡ ರಾಜ್ಯದ 14 ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳು ನಡೆಯುತ್ತಿವೆ. 2022ರ ವೇಳೆ ಇದನ್ನು ನಿರ್ಮೂಲನೆ ಮಾಡುವ ಗುರಿ ಇದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version