ದಿನದ ಸುದ್ದಿ
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
ಸುದ್ದಿದಿನ, ಬೆಂಗಳೂರು : ರಾಜ್ಯ ಸಚಿವ ಸಂಪುಟದ ವಿಸ್ತರಣೆಯಲ್ಲಿ ನೂತನವಾಗಿ ಏಳು ಮಂದಿ ಹೊಸ ಸಚಿವರ ಹೆಸರುಗಳನ್ನು ಸಿಎಂ ಯಡಿಯೂರಪ್ಪ ಅವರು ಅಂತಿಮಗೊಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಪಟ್ಟಿಯಲ್ಲಿರುವ ಏಳು ಜನ ಸಚಿವ ಸ್ಥಾನ ಫೈನಲ್ ಆಗಿರುವ ಶಾಸಕರುಗಳ ಹೆಸರುಗಳಿವು.
ಸಿ.ಪಿ.ಯೋಗೇಶ್ವರ್ ,ಉಮೇಶ್ ಕತ್ತಿ, ಎಂಟಿಬಿ ನಾಗರಾಜ್, ಅರವಿಂದ ಲಿಂಬಾವಳಿ,ಆರ್ ಶಂಕರ್
ಎಸ್. ಅಂಗಾರ, ಮುರುಗೇಶ್ ನಿರಾಣಿ ಇವರುಗಳ ಹೆಸರುಗಳನ್ನು ಅಂತಿಮ ಗೊಳಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243