ದಿನದ ಸುದ್ದಿ

ಪತ್ನಿಗೆ ಲೈಂಗಿಕ ಕಿರುಕುಳ ನೀಡಲು ಸಾಥ್ ಕೊಟ್ಟ ಪತ್ರಕರ್ತ ರಾಜೇಶ್ ಬೋರೆ..!

Published

on

ಸುದ್ದಿದಿನ, ಮೈಸೂರು : ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣ ಆರೋಪಿ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯನನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.

ರಾಮಕೃಷ್ಣ ನಗರದಲ್ಲಿರುವ ಮನೆಗೆ ಮಧ್ಯರಾತ್ರಿ ತೆರಳಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಪತ್ರಕರ್ತ ರಾಜೇಶ್ ಬೋರೆ ಪತ್ನಿ, ಲೈಂಗಿಕ ಕಿರುಕುಳಕ್ಕೆ ಪತಿ ರಾಜೇಶ್ ಬೋರೆ ಸೇರಿದಂತೆ, ಸ್ವಾಮೀಜಿ ಹಾಗೂ ಇತರ 5 ಮಂದಿ ನೀಡಿರುವುದಾಗಿ ಆರೋಪಿಸಿದ್ದಾರೆ. ಸೆಪ್ಟೆಂಬರ್ 4 ರಂದು ಘಟನೆ ನಡೆದಿತ್ತು. 7 ನೇ ತಾರೀಕು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದ ದಿನದಿಂದ ನಾಪತ್ತೆಯಾಗಿರುವ ಸ್ವಾಮೀಜಿ ಹಾಗೂ ರಾಜೇಶ್ ಬೋರೆ.
ಘಟನೆ ನಡೆದ ವೇಳೆ 5 ಮಂದಿ ಪೈಕಿ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಇದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version