ದಿನದ ಸುದ್ದಿ

ವಿಡಿಯೋ | ಹಿಂದೂ-ಮುಸ್ಲಿಂ ಭಾವೈಕ್ಯತೆಯ ಜಿಲೇಬಿ ಜಾತ್ರೆ : ಇಲ್ಲಿ ಜಿಲೇಬಿ ಸವಿದರೆ ಇಷ್ಟಾರ್ಥ ಸಿದ್ದಿ ಎಂಬ ನಂಬಿಕೆ

Published

on

  • ವರದಿ: ನಿಂಗಣ್ಣ

ಸುದ್ದಿದಿನ,ಯಾದಗಿರಿ (ಶಹಾಪುರ): ಆ ಗ್ರಾಮದ ದರ್ಗಾದ ದೇವರು ಹಿಂದೂ-ಮುಸ್ಲಿಮರ ಆರಾಧ್ಯದೈವ
ಚಾವಡಿ ಮುಂದೆ ವರ್ಷಕ್ಕೊಮ್ಮೆ ನಡೆಯುವ ಜಿಲೇಬಿ ಜಾತ್ರೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ ಕೂಡ ಆದರೆ ದೇವರ ದರ್ಶನ ಪಡೆದ ನಂತರ ರುಚಿ ರುಚಿ ಜಿಲೇಬಿ ತಿನ್ನಲೇಬೇಕು.

ಅರೆ, ದೇವರ ದರ್ಶನಕ್ಕೂ ಜಿಲೇಬಿ ತಿನ್ನುವುದಕ್ಕೂ ಏನು ಸಂಬಂಧ ಅಂತೀರಾ..? ಈ ಸ್ಟೋರಿ ನೋಡಿ..

ಹೀಗೆ ಎಲ್ಲಿ ನೋಡಿದರೂ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಜಿಲೇಬಿ ಕಾಣಸಿಗುವುದು, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾಗರ ಗ್ರಾಮದ ಗ್ರಾಮದ ಹಜರತ್ ಮುನವರ್ ಬಾಷ
ದರ್ಗಾದ ಜಿಲೇಬಿ ಜಾತ್ರೆಯಲ್ಲಿ.

ಹೌದು, ಈ ಗ್ರಾಮದ ಆರಾಧ್ಯದೈವ ಹಿಂದೂ-ಮುಸ್ಲಿಮರ ಭಾವೈಕ್ಯತೆ ನಾನಾಬಗೆಯ ರುಚಿ ರುಚಿ ಜಿಲೇಬಿ ತಿನ್ನುವುದು ಇಲ್ಲಿ ವಾಡಿಕೆ
ಈ ಪದ್ಧತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಹೀಗೆ ದೇವರ ದರ್ಶನ ಪಡೆದು ಜಿಲೇಬಿ ತಿಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

ಸಗರ ಗ್ರಾಮದ ಹೃದಯಭಾಗದ ದರ್ಗಾದ ಚಾವಡಿ ಮುಂದೆ ಕೇವಲ ಮೂರು ಗಂಟೆ ಮಾತ್ರ ಈ ಜಿಲೇಬಿ ಜಾತ್ರೆ ನಡೆಯುತ್ತದೆ. ಆನಂತರ ಬಂದವರಿಗೆ ಒಂದು ಸ್ವಲ್ಪವೂ ಜಿಲೇಬಿ ಸಿಗುವುದಿಲ್ಲ.

ಇನ್ನು ಜಾತ್ರೆಯಲ್ಲಿ ಸಜ್ಜೆ ಜಿಲೇಬಿ ತುಂಬಾ ಫೇಮಸ್. ಜಿಲೇಬಿ ವ್ಯಾಪಾರಿಗಳು ಭಕ್ತರು ಬೇಡಿದಾಗ ತಕ್ಷಣ ಬಿಸಿಬಿಸಿ ಜಿಲೇಬಿ ಹಾಕಿ ಕೊಡುತ್ತಾರೆ ಸಜ್ಜೆ ಸಕ್ಕರೆ ಬೆಲ್ಲದಿಂದ ಮಾಡಿದ ಮೆತ್ತ ಮತ್ತೆಗೆ ಮತ್ತು ಕುರುಕಲು ಸ್ವಾದಿಷ್ಟ ಜಿಲೇಬಿ ಇಲ್ಲಿ ಸಿಗುತ್ತದೆ.

ಈ ಜಿಲೇಬಿ ಸ್ವಾದ ಸವಿಯಲೆಂದೇ ಜಿಲ್ಲೆಯ ನಾನಾ ಭಾಗಗಳಿಂದ ಜನ ಬಂದು ಜಿಲೇಬಿ ಚಪ್ಪರಿಸುತ್ತಾರೆ ದೇವರ ದರ್ಶನ ನಂತರ ಜಿಲೇಬಿ ಸವಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಜಾತ್ರೆ ಗಳೆಂದರೆ ಹಾಗೆ ತನ್ನದೇ ವೈಶಿಷ್ಟ್ಯ ಹೊಂದಿರುತ್ತದೆ ಜಾತ್ರೆಯಲ್ಲಿ ಜಿಲೇಬಿ ಸಿಗುವುದು ಕಾಮನ್ ಆದರೆ ಇಲ್ಲಿ ಜಾತ್ರೆ ನಡೆಯುತ್ತದೆ. ವಿಶೇಷ ನಿಮಗೂ ಜಿಲೇಬಿಯ ಸ್ವಾದ ಸವಿಯ ಬೇಕೆನ್ನಿಸಿದರೆ, ವಿವಿಧ ಬಗೆಯ ಜಿಲೇಬಿಗೆಂದೇ ಪ್ರಸಿದ್ಧವಾದ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಗರ ಗ್ರಾಮದ ಈ ಜಾತ್ರೆ
ಜಿಲೇಬಿ ಜಾತ್ರೆಗೆ ಬನ್ನಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version