ದಿನದ ಸುದ್ದಿ
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್’ ಗೆ ‘ಕರುನಾಡ ಕುವೆಂಪು ರತ್ನ’ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದ ಯುವ ಕವಿ ‘ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್’ ಇವರಿಗೆ ‘ಕರುನಾಡ ಕುವೆಂಪು ರತ್ನ’ ರಾಜ್ಯ ಪ್ರಶಸ್ತಿ ಲಭಿಸಿದೆ.
2019ನೆಯ ಸಾಲಿನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನ ಸಹಾಯ ಪಡೆದಿರುವ ‘ಮೋಹದ ಮೋಡಗಳು‘ ಎಂಬ ಕೃತಿಗೆ ಕರುನಾಡ ಹಣತೆ ಕವಿಬಳಗ ಹಾಗೂ ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ ಇವರು ಫೆ.14 ರಂದು ತ. ರಾ. ಸು. ರಂಗಮಂದಿರ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ದ್ವಿತೀಯ ಕರುನಾಡ ವಾರ್ಷಿಕೋತ್ಸವ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ‘ಕರುನಾಡ ಕುವೆಂಪು ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243