ದಿನದ ಸುದ್ದಿ
90ರ ಹರೆಯದಲ್ಲೂ ಕೊರೋನಾ ಗೆದ್ದ ದಾವಣಗೆರೆಯ ಧಣಿ
ಸುದ್ದಿದಿನ, ದಾವಣಗೆರೆ: ಬೆಂಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಗುಣಮುಖರಾಗಿ ಬಿಡುಗಡೆ ಹೊಂದಿರುವ ಶಾಮನೂರು ಶಿವಶಂಕಪ್ಪ ಅವರು ಸಾರ್ವಜನಿಕರಲ್ಲಿ ಕರೊನಾ ಒಂದು ಸಾಮಾನ್ಯ ಕಾಯಿಲೆ ಜನರು ಹೆದರುವ ಅವಶ್ಯಕತೆ ಇಲ್ಲ ಇದಕ್ಕೆ ಹೆದರುವುದರಿಂದಲೇ ಹೆಚ್ಚು ಸಮಸ್ಯೆ ಉಂಟಾಗುತ್ತದೆ ಎಂದರು.
ಹೊರಗಡೆ ಓಡಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಬೇರೆ ಜನರೊಂದಿಗೆ ಮಾತನಾಡುವಾಗ ಮಾಸ್ಕ್ ಧರಿಸಬೇಕು, ಸುಮ್ಮನೆ ಅನಾವಶ್ಯಕವಾಗಿ ಯಾರ ಹತ್ತಿರವೂ ಹೋಗಬೇಡಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಇಷ್ಟಿದ್ದರೆ ಕರೋನಾ ಬರುವುದಿಲ್ಲವೆಂದು ತಿಳಿಸಿದರು
ನೆಗಡಿ ಜ್ವರ ಬಾರದಂತೆ ಜಾಗೃತರಾಗಿರಿ ಬಂದರೂ ಒಂದು ವಾರದ ನಂತರ ಗುಣಮುಖರಾಗುತ್ತಾರೆ ಹೆದರಿಕೊಂಡು ಅಪಾಯ ಆಹ್ವಾನಿಸುವುದು ಕ್ಕಿಂತ ಗುಂಡಿಗೆ ಗಟ್ಟಿ ಮಾಡಿಕೊಂಡು ಬದುಕಿರಿ ಎಂದು ಡಾಕ್ಟರ್ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ
ರಾಜಕೀಯ ಕ್ಷೇತ್ರದಲ್ಲಿ ಇರುವುದರಿಂದ ತಮ್ಮನ್ನು ಭೇಟಿಮಾಡಲು ಜನಸಾಮಾನ್ಯರು ಬರುತ್ತಾರೆ ಹೋಗುತ್ತಾರೆ ಹಾಗಾಗಿ ನಮ್ಮ ಕುಟುಂಬದ ಸದಸ್ಯರಿಗೂ ಕರೋನ ಬಂದಿತ್ತು ಕೆಲದಿನಗಳ ಬಳಿಕ ಪರೀಕ್ಷೆ ಮಾಡಿಸಿದಾಗ ನನಗೂ ಸೋಂಕು ತಗುಲಿರುವುದು ದೃಢವಾಗಿತ್ತು.
ಈಗ ಕೊರೋನಾ ಪಾಡು ಮುಗೀತು ಕರೋನಾ ಯಾವಾಗ ಬರುತ್ತೋ ಎಂದು ಅಂದುಕೊಳ್ಳುವುದಕ್ಕಿಂತ ಅದು ಬಂದು ಹೋಗಿರುವುದು ಒಳ್ಳೆಯದೇ ಆಯ್ತು ಎಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದು ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಅನುಭವನ ಹಂಚಿಕೊಂಡಿದ್ದಾರೆ.
ಇನ್ನು ಒಂದು ವಾರದ ಕಾಲ ಸಾರ್ವಜನಿಕವಾಗಿ ಯಾರನ್ನು ಭೇಟಿ ಮಾಡಲು ಸಾಧ್ಯವಿಲ್ಲದ ಕಾರಣ ಸಾರ್ವಜನಿಕವಾಗಿ ಕುಂದುಕೊರತೆಗಳು ಇದ್ದರೆ ತಮ್ಮ ಮೊಬೈಲಿಗೆ ಕರೆ ಕರೆ ಮಾಡಿ ಎಂದು ತಿಳಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸ್ಯಾಪ್|9980346234