ರಾಜಕೀಯ

ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿಯಾಗುವ ಅರ್ಹತೆಯಿದೆ : ಶಾಮನೂರು ಶಿವಶಂಕರಪ್ಪ

Published

on

ಸುದ್ದಿದಿನ,ದಾವಣಗೆರೆ : ಮಲ್ಲಿಕಾರ್ಜುನ್ ಖರ್ಗೆ ಮುಖ್ಯಮಂತ್ರಿ ಅಲ್ಲ ಅವರು ಈ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ನಡೆದ ಛಲವಾದಿ ಮಹಾಸಭ ಏರ್ಪಡಿಸಿದ್ದ ಅಭಿನಂದನಾ ಹಾಗೂ ಜನ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪ್ರಧಾನಿ ಮೋದಿ ಯವರನ್ನು ಎದರಿಸುವ ತಾಕತ್ತು ಮಲ್ಲಿಕಾರ್ಜುನ್ ಅವರಿಗಿದೆ. ಅದು ರಾಹುಲ್ ಗಾಂಧಿಯವರಿಂದಲೂ ಮೋದಿ ಎದುರಿಸಲು ಸಾಧ್ಯವಿಲ್ಲ‌ ಎಂದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮೊದಲ ದಲಿತ ಮುಖಂಡ ದಿ ಕೆ ಹೆಚ್ ರಂಗನಾಥ್ ದಿ. ಬಸವಲಿಂಗಪ್ಪ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು ಆಗಲಿಲ್ಲ.‌ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಷ್ಟೇ ಅಲ್ಲ ಈ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ‌ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version