ದಿನದ ಸುದ್ದಿ

ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರಗಳು ಇಡಿ, ಐಟಿ ಮತ್ತು ಪಕ್ಷದ ಗಮನಕ್ಕೆ ಬಂದಿಲ್ಲವಾ..? : ಶಂಕರ್ ಬಿದರಿ ಸರಣಿ ಟ್ವೀಟ್

Published

on

ಸುದ್ದಿದಿನ,ಬೆಂಗಳೂರು: ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತೊಗೆಯಿರಿ ಎಂದು ಬಿಜೆಪಿ ವರಿಷ್ಠ ರಿಗೆ ಸರಣಿ ಟ್ವೀಟ್ ಮಾಡುವ ಮೂಲಕ ಮಾಜಿ ಪೋಲಿಸ್ ಮಹಾ ನಿರ್ದೇಶಕ ಶಂಕರ ಬಿದರಿ ಅವರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬಸ್ಥರು ಇಷ್ಟೊಂದು ಭ್ರಷ್ಟಾಚಾರ ನಡೆಸುತ್ತಿದ್ದರೂ ಇನ್ನೂ ಏಕೆ ಅವರನ್ನು ಅಧಿಕಾರದಲ್ಲಿಟ್ಟಿದ್ದೀರಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿಯೊಂದು ಬಿ.ಎಸ್.‌ಯಡಿಯೂರಪ್ಪ ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ವಿಸ್ತೃತವಾದ ವರದಿ ಮಾಡಿದೆ. ಇಷ್ಟಾದರೂ ಇದು ಐಟಿ, ಇಡಿ ಮತ್ತು ಪಕ್ಷದ ಗಮನಕ್ಕೆ ಬಂದಿಲ್ಲವಾ ! ಎಂದು ಪ್ರಶ್ನಿಸಿದ್ದಾರೆ.

ಪಕ್ಷದ ವರಿಷ್ಠರಿಗೆ ಪ್ರಶ್ನೆಗಳ‌ಸುರಿಮಳೆ ಗೈದಿರುವ ಅವರು, ಪಕ್ಷದ ಗೌರವದ ಬಗ್ಗೆ, ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇಲ್ಲವಾಯಿತೆ? ನಿಮ್ಮ ಹೀಗೆ ಸುಮ್ಮನಿರುವುದನ್ನು ದೇಶ ಏನೆಂದು ಅರ್ಥೈಸಿಕೊಳ್ಳಬೇಕು? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿದರಿ ಪ್ರಶ್ನೆ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version