ಅಂಕಣ

ಕವಿತೆ | ಶಾಂತಿ ಮತ್ತು ಮಗು..!

Published

on

~ ಬಿ.ಶ್ರೀನಿವಾಸ

ಓಟದ ಸ್ಪರ್ಧೆ,
ಕಪ್ಪೆ ಜಿಗಿತ,
ಮ್ಯೂಸಿಕಲ್ ಚೇರು
ಸ್ಪರ್ಧೆಗಳಲ್ಲಿ ಗೆದ್ದ ಪುಟ್ಟ ಪುಟ್ಟ
ಕಪ್ಪು,
ಮೆಡಲುಗಳನು,
ಒಂದೊಂದಾಗಿ
ಹರಡುತ್ತಿದೆ
ಪುಟ್ಟ ಶಾಲೆಯ ಮಗು!
ನೊಬೆಲ್ ಶಾಂತಿ ಪ್ರಶಸ್ತಿ ವಂಚಿತನ ಮುಂದೆ!

ಶಾಂತಿ
ಪ್ರಶಸ್ತಿಗಳು
ಕೈತಪ್ಪಿದಾಗ
ಯುದ್ಧಗಳು ಘೋಷಣೆಯಾಗುತ್ತವೆ ಎಂಬ ಭಯವಿದೆ!

————————

ಅಮೆರಿಕ-ಕಾರಣಿಕ

ಯುದ್ಧಗಳು
ಘಟಿಸುತ್ತವೆ

ಶಾಂತಿ
ಸ್ಪೋಟಿಸುತ್ತದೆ !

ಇದು
ಆ ಊರಿನ ಕಾರಣಿಕ!

ಅಲ್ಲಿ
ಸ್ವಾತಂತ್ರ್ಯ
ಎನ್ನುವುದು
ಅಲುಗಾಡದೆ ನಿಂತ
ಶಾಂತ ಮೂರ್ತಿ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version