ದಿನದ ಸುದ್ದಿ
ಕಾಣೆಯಾಗಿದ್ದಾರೆ
ಸುದ್ದಿದಿನ,ಶಿವಮೊಗ್ಗ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಡರಹೊಸಹಳ್ಳಿ ಗ್ರಾಮ ವಾಸಿ ರಂಗೇಶಪ್ಪ ಬಿನ್ ರುದ್ರಪ್ಪರವರ ಮಗಳು ಸಂಗೀತ ಎಂಬ 17 ವರ್ಷದ ಯುವತಿ ಮೇ 20ರಿಂದ ಕಾಣೆಯಾಗಿದ್ದಾರೆ. ಕಾಲೇಜ್‍ಗೆ ಹೋದವರು ವಾಪಸ್ಸು ಬಂದಿರುವುದಿಲ್ಲ.
ಈ ಯುವತಿಯ ಚಹರೆ 5.2 ಅಡಿ ಎತ್ತರ, ಕೋಲು ಮುಖ,ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ & ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಬಿಳಿ ಚೂಡಿದಾರ ಧರಿಸಿರುತ್ತಾರೆ.
ಈಕೆಯ ಬಗ್ಗೆ ಸುಳಿವು ದೊರತಲ್ಲಿ ದೂ.ಸಂ.:08182-261418/261410/261422/9480803350 ಅಥವಾ ಪೊ.ಕಂಟೋಲ್ ರೂಂ ನಂ. 100ಕ್ಕೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.