ದಿನದ ಸುದ್ದಿ
ಶೀನಾ ಬೋರಾ ಪ್ರಕರಣ : ಪೀಟರ್ ಮುಖರ್ಜಿ ಪತ್ನಿ ಇಂದ್ರಾಣಿಗೆ ವಿಚ್ಛೇದನ
ಸುದ್ದಿದಿನ ಡೆಸ್ಕ್ : ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುರ್ಖಜಿಗೆ ಮಾಜಿ ಮಾಧ್ಯಮ ದಿಗ್ಗಜ ಪೀಟರ್ ಮುಖರ್ಜಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದು , ಇಬ್ಬರು ವಿಚ್ಛೇದನ ಪಡೆದುಕೊಳ್ಳಲು ಪರಸ್ಪರ ಒಪ್ಪಿಕೊಂಡಿದ್ದಾರೆ ಎಂದು ವಕೀಲ ಎಡಿತ್ ಡೇ ತಿಳಿಸಿದ್ದಾರೆ.
ಇಂದ್ರಾಣಿ ಮುಖರ್ಜಿ ಅವರು ತಮ್ಮ ಎರಡನೇ ಗಂಡನಿ ಪೀಟರ್ ಮುಖರ್ಜಿ ಅವರಿಗೆ ವಿಚ್ಛೇದನ ಕೊಡಲು ಬಯಸಿ 2017ರ ಜನವರಿ 17ರಂದು ಅರ್ಜಿ ಸಲ್ಲಿಸಿದ್ದರೆಂದು ಕೇಂದ್ರ ತನಿಖಾ ದಳದ ಕೋರ್ಟ್ ತಿಳಿಸಿದೆ. ಇಬ್ಬರು ಜೈಲಿನಲ್ಲಿ ಇರುವುದರಿಂದ ವಿಚ್ಛೇದನ ಪ್ರಕ್ರಿಯೆ ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪೀಟರ್ ಪರ ವಕೀಲ ರಿಜಿಸ್ಟರ್ಡ್ ಪೋಸ್ಟ್ ನಿಂದ ಪ್ರತ್ಯುತ್ತರ ಬಂದಿದೆ. ಇದಕ್ಕೆ ಇಬ್ಬರ ಪರಸ್ಪರ ಒಪ್ಪಿಗೆ ಇದೆ.
ಇಂದ್ರಾಣಿ ಮುಖರ್ಜಿ ಏಪ್ರಿಲ್ನಲ್ಲಿ ನೀಡಿದ್ದ ನೋಟಿಸ್ ಗೆ ಪೀಟರ್ ಪರ ವಕೀಲರಿಂದ ಉತ್ತರ ಕಳುಹಿಸಲಾಗಿದೆ. ವಿಚ್ಛೇದನದ ನಿಯಮಾವಳಿ ಪ್ರಕಾರ ಕೆಲಸ ಮಾಡುತ್ತಿದ್ದು, “ದೋಷಪೂರಿತವಾಗಿ ವಿಭಜಿಸಲಾಗಿದೆ” ಎಂದು ಮದುವೆಯೂ ವಿಚ್ಛೇದನಗೊಂಡಿದೆ ಎಂದು ಪೀಟರ್ ಪರ ವಕೀಲ ತಿಳಿಸಿದ್ದಾರೆ. ಇಂದ್ರಾಣಿ ಮುಖರ್ಜಿಯ ಮಗಳು ಶೀನಾ ಬೋರಾ (24)ಳನ್ನು 2012ರ ಏಪ್ರಿಲ್‌ನಲ್ಲಿ ಕೊಲೆ ನಡೆದಿತ್ತು.