ದಿನದ ಸುದ್ದಿ

ಖರ್ಬೂಜ ಬಳ್ಳಿ ತಿಂದು 50 ಕುರಿಗಳು ಸಾವು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ಚಿತ್ರದುರ್ಗ: ವೇಣುಕಲ್ಲುಗುಡ್ಡ ಗೊಲ್ಲರಹಟ್ಟಿಯಲ್ಲಿ ಖರ್ಬೂಜ ಬಳ್ಳಿ ತಿಂದು 50 ಕುರಿಗಳು ಸಾವನ್ನಪ್ಪರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ಲುಗುಡ್ಡ ಗ್ರಾಮದಲ್ಲಿ ನಡೆದಿದೆ.

ಇವು ರಾಮಕೃಷ್ಣಪ್ಪ ಮತ್ತು ಸುನಿಲ್ ಎಂಬುವರಿಗೆ ಸೇರಿದ ಕುರಿಗಳಾಗಿದ್ದವು. ಲಾಕ್ ಡೌನ್ ಹಿನ್ನೆಲೆ ಸರಿಯಾದ ಬೆಲೆ ಸಿಗದೆ ಜಮೀನಿನಲ್ಲಿ ಕೀಳದೆ ಬಿಟ್ಟಿದ್ದ ಖರ್ಬೂಜ ಬೆಳೆ ಮೇಯಲು ಕುರಿಗಳನ್ನು ಬಿಟ್ಟಿದ್ದರು.ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ಹನುಮಪ್ಪ ಬೇಟಿ‌ನೀಡಿ ಪರೀಕ್ಷಿಸಿ
ಕೊಳೆತ ಬಳ್ಳಿ ಮತ್ತು ಬೂಸ್ಟ್ ಹಿಡಿದ ಹಣ್ಣು ತಿಂದ ಪರಿಣಾಮ ಕುರಿಗಳು ಸಾವಿನಪ್ಪಿರ ಬಹುದು ಎಂದಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version