ದಿನದ ಸುದ್ದಿ
ಶೀರೂರು ಶ್ರೀ ವಿಧಿವಶ
ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥಶ್ರೀಪಾದರು ಗುರುವಾರ ಬೆಳಗ್ಗೆ ಕೀರ್ತಿಶೇಷರಾಗಿದ್ದಾರೆ.
ಸುದ್ದಿದಿನ ಡೆಸ್ಕ್: ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥಶ್ರೀಪಾದರು ಗುರುವಾರ ಬೆಳಗ್ಗೆ ಕೀರ್ತಿಶೇಷರಾಗಿದ್ದಾರೆ.
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಂಗಳವಾರ ತೀವ್ರ ಅಸ್ಚಾಸ್ಥ್ಯದ ಹಿನ್ನೆಲೆಯಲ್ಲಿ ತೀವ್ರ ನಿಗಾ ವಿಭಾಗಕ್ಕೆ ದಾಖಲಾಗಿದ್ದರು.ಆದರೆ ಚಿಕಿತ್ಸೆಫಲಕಾರಿಯಾಗಿಲ್ಲ. ಶ್ರೀಪಾದರು ವಿಧಿವಶರಾಗಿದ್ದನ್ನು ಮಣಿಪಾಲ ಕೆಎಂಸಿಯ ಡಾ ರವಿಕಿರಣ್ ಖಚಿತಡಿಸಿದ್ದಾರೆ.
ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಹಠಾತ್ತಾಗಿ ಪರಂಧಾಮವನೈದಿದ ವಿಷಯ ತಿಳಿದು ಖೇದವಾಯಿತು. ಉಡುಪಿಯ ಸಾಂಸ್ಕೃತಿಕ ಸೇನಾನಿಯಾಗಿದ್ದುಕೊಂಡು ಶಾಂತಿ, ಸಾಮರಸ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿರಿಸಿದ ಶೀರೂರು ಶ್ರೀಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಫೇಸ್ ಬುಕ್ ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.