ದಿನದ ಸುದ್ದಿ

ಶಿವಮೊಗ್ಗ | ಆಗಸ್ಟ್ 18ರಂದು ‘ಭಾವ ಸಂಗಮ’ ದಿಂದ ‘ಸಾಹಿತ್ಯ ಸಮಾಗಮ’

Published

on

ಸುದ್ದಿದಿನ,ಶಿವಮೊಗ್ಗ: ಆಗಸ್ಟ್ 18ರಂದು ಬೆಳಿಗ್ಗೆ 9.30 ರಿಂದ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾವ ಸಂಗಮದ ನಾಲ್ಕನೆಯ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಸಾಂಸ್ಕೃತಿಕ ಸಮಾಗಮ ನಡೆಯುತ್ತಿದೆ.

ಶಿವಮೊಗ್ಗ ಮತ್ತು ಸಮೀಪವಿದ್ದವರು, ಮುಖಪುಟ ಸ್ನೇಹಿತರು, ವಾಟ್ಸಾಪ್ ಸ್ನೇಹಿತರು, ಸಾಹಿತ್ಯ, ಕಲೆ, ಸಂಗೀತ,, ನೃತ್ಯಾಸಕ್ತರು ಈ ಸಮಾಗಮಕ್ಕೆ ಆಗಮಿಸಬೇಕೆಂದು ಸಮಾಗಮ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ. ಹಿರಿಯ ಲೇಖಕ, ಕವಿ ಶ್ರೀ ರಾಜೇಂದ್ರ ಪಾಟೀಲ ಅವರು ಭಾವ ಸಂಗಮ ಎಂಬ ಹೆಸರಿನಲ್ಲಿ ವಾಟ್ಸಪ್‍ ಗ್ರುಪ್‍‍ನ್ನು ತೆರೆದಿದ್ದು, ಇದರಲ್ಲಿ ಸುಮಾರು 250ಕ್ಕೂ ಹೆಚ್ಚು ಚಿಂತಕರು, ಕವಿಗಳು, ಕಲಾವಿದರು, ನೃತ್ಯ ಕಲಾವಿದರು, ಸಂಗೀತಗಾರರು, ಬರಹಗಾರರು ಇರುತ್ತಾರೆ.

ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ಈ ಕಾರ್ಯಕ್ರಮವಿರುತ್ತದೆ. ಈ ಸಲ ಶಿವಮೊಗ್ಗದಲ್ಲಿ 18 ರಂದು ರವಿವಾರ ಇರುತ್ತದೆ. ಕಾರ್ಯಕ್ರಮದ ಉದ್ದಗಲಕ್ಕೂ ಮನರಂಜನೆ, ಡಾ.ಪ್ರಕಾಶ ಖಾಡೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಯಶವಂತ ವಾಜಂತ್ರಿಯವರ ನಗೆಲಾಸ್ಯ ಇತರೆ ಗೋಷ್ಠಿಗಳು ಇರುತ್ತವೆ.

ಶ್ರೀಮತಿ ವಿಜಯಾ ಬಾಯರಿ, ಶೀಲಾ ಸುರೇಶ, ಬೇದ್ರೆ ಹರೀಶ, ಸರೋಜಾ, ರಾ.ಸು ವೆಂಕಟೇಶ, ಶಂಕರ ಹೂಗಾರ, ಶ್ರೀಮತಿ ಸರಸ್ವತಿ ಟಿ.ಎನ್, ಸಹನಾ ಚೇತನ, ರಮೇಶ ಗುಬ್ಬಿ, ಶ್ರೀರಂಜಿನಿ ದತ್ತಾತ್ರಿ, ಪಿ.ಎಸ್. ಶ್ರೀಕಾಂತ ಮತ್ತಿತರ ಸಹಕಾರದಿಂದ ಹಾಗೂ ರಾಜೇಂದ್ರ ಪಾಟೀಲ ಅವರ ನೇತೃತ್ವದಲ್ಲಿ ಈ ಸಮಾ-ಘಮವು ಜರುಗುತ್ತಲಿದೆ. ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಲು ಸಮಾಗಮ ಸಮಿತಿ ಕೋರಿದೆ.

ಈ ಸಮಾಘಮದಲ್ಲಿ ವೆಂಕಟೇಶ ಇನಾಮದಾರ ಹಾಗೂ ಏಕನಾಥ ಬೊಂಗಾಳೆ ಯವರಿಂದ ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ವಿಜಯಾ ನಾಡಿಗೇರ ಇವರಿಂದ ಪೇಂಟಿಂಗ್ಸ್‍ ಪ್ರದರ್ಶನವಿರುತ್ತದೆ.ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ಲೇಖಕಿ ವಿಜಯಾ ಶ್ರೀಧರ ಸಮಾಗಮ ಉದ್ಘಾಟಿಸಲಿದ್ದಾರೆ. ಸುಮಾ ಕಳಸಾಪುರ ಮತ್ತು ನೂರ್ ಸಮದ್ ಅಬ್ಬಲಗೆರೆ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ 9591323453 ಗೆ ಸಂಪರ್ಕಿಸಲು ಕೋರಲಾಗಿದೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version