ದಿನದ ಸುದ್ದಿ

ಶಿವಮೊಗ್ಗ | ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚು ರೂಪಿಸಿದವರ ಬಂಧನ

Published

on

ಸುದ್ದಿದಿನ,ಶಿವಮೊಗ್ಗ: ನಗರದಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ 7ಕ್ಕೂ ಹೆಚ್ಚು ಜನರ ಪೂಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹಿಂದೆ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷನ ಸ್ನೇಹಿತ ಸಚಿನ್ ರಾಯ್ಕರ್ ಸೇರಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಸುಮಾರು 13 ಮಂದಿ ವ್ಯವಸ್ಥಿತವಾಗಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹತ್ಯೆಗಾಗಿ ಎಲ್ಲಾ ತಯಾರಿಗಳು ಮುಗಿದು ಹೋಗಿದ್ದವು. ಇನ್ನೇನು ಪ್ಲ್ಯಾನ್​ ಎಕ್ಸಿಕ್ಯೂಟಿವ್ ಮಾಡೋದಷ್ಟೆ ಬಾಕಿಯಿತ್ತು.

ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚು ರೂಪುಗೊಂಡ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಎಸ್​ಪಿ ಲಕ್ಷ್ಮಿ ಪ್ರಸಾದ್ ಅವರು, ಕೊಲೆ ಸಂಚು ಭೇದಿಸುವುದಕ್ಕಾಗಿ ಖಡಕ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಿದ್ದರು.

ಯಾರೆಲ್ಲಾ ಕೊಲೆಯ ಸಂಚಿನಲ್ಲಿ ಭಾಗಿಯಾಗಿರುವ ಅನುಮಾನವಿತ್ತೋ ಅಂತಹವರನ್ನೆಲ್ಲಾ ಅರೆಸ್ಟ್ ಮಾಡಿ ವಿಚಾರಣೆ ನಡಡೆಸಿದ್ದಾರೆ. ಈ ವೇಳೆ ಆರೋಪಿಗಳು ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹರ್ಷ ಚಾರಿಟಬಲ್ ಟ್ರಸ್ಟ್​ನ ಪದಾಧಿಕಾರಿ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಚಿನ್ ರಾಯ್ಕರ್ ಕೂಡ ಸಂಚಿನಲ್ಲಿ ಭಾಗಿಯಾಗಿದ್ದ. ಪೊಲೀಸರು ದಾಖಲಿಸಿರುವ ಎಫ್​ಐಆರ್​ನಲ್ಲಿ ಸಚಿನ್ ರಾಯ್ಕರ್ 9ನೇ ಆರೋಪಿ. ಪ್ರಸ್ತುತ ನಾಪತ್ತೆಯಾಗಿದ್ದಾನೆ.

ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆಗೆ ಹೇಗೆ ರೌಡಿ ಖಾಸಿಫ್ ಅಂಡ್ ಗ್ಯಾಂಗ್ ವ್ಯವಸ್ಥಿತವಾಗಿ ಸಂಚು ರೂಪಿಸಿತ್ತೋ, ಅದೇ ಮಾದರಿಯಲ್ಲಿ ಇಲ್ಲೂ ಕೂಡ ಈ ಗ್ಯಾಂಗ್ ಕೊಲೆಗೆ ಸಂಚು ರೂಪಿಸಿತ್ತು. ಅತ್ತ ಖಾಸಿಫ್ ಹರ್ಷ ಕೊಲೆಗೆ ಸ್ವಿಫ್ಟ್​ ಕಾರು ಬಳಿಸಿದ್ರೆ, ಇಲ್ಲಿ ಈ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಲು ಮಾರುತಿ ಆಲ್ಟೋ ಕಾರನ್ನು ಖರೀದಿಸಿತ್ತು. 30 ಸಾವಿರ ಕೊಟ್ಟು ಕಾರು ಹಾಗೂ ಕೊಲೆ ಮಾಡಲು ಬ್ಯಾಟ್​ಗಳನ್ನೆಲ್ಲಾ ಒಂದೆಡೆ ಕ್ರೂಡೀಕರಿಸಿದ್ದರು.

ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಇಷ್ಟು ದಿನ ಜೈಲಿನಲ್ಲಿದ್ದ ಆರೋಪಿ ಪ್ರವೀಣ್ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದ. ಪ್ರವೀಣ್ ಜಾಮೀನು ಪಡೆದು ಇತ್ತೀಚೆಗಷ್ಟೇ ಶಿವಮೊಗ್ಗದ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದ. ರೌಡಿಶೀಟರ್ ಪ್ರವೀಣನೇ ಮಂಚೂಣಿಯಲ್ಲಿ ನಿಂತು ಕೊಲೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಈತ ಹೆಬ್ಬೆಟ್ ಮಂಜನ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದ. ಈತನನ್ನು ಕೂಡ ದೊಡ್ಡಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version