ರಾಜಕೀಯ

ಶಿವಮೊಗ್ಗ ಲೋಕಸಭಾ ಉಪಚುನಾವಣೆ : ಉಡುಪಿಯ ಬೈಂದೂರಲ್ಲಿ ಬಿರುಸಿನ ಮತದಾನ

Published

on

ಸುದ್ದಿದಿನ,ಉಡುಪಿ : ತಾಲೂಕು ಕೇಂದ್ರವಾದ ಬಳಿಕ ಮೊದಲ ಬಾರಿ ಬೈಂದೂರಿನಲ್ಲಿ ಮತದಾನ‌ ಬಿರುಸಿನಿಂದ ಕೂಡಿದೆ. ಬೈಂದೂರು ಕ್ಷೇತ್ರದಲ್ಲಿ ಒಟ್ಟು 221972 ಮತದಾರರು, 107922 ಪುರುಷ ಹಾಗೂ 114049 ಮಹಿಳೆ ಮತ್ತು 1 ಇತರೆ ಮತದಾರರು ಇದ್ದಾರೆ.

ಪಂಚಾಯತ್ ಕಾರ್ಯಾಲಯ ಮರವಂತೆ ಹಾಗೂ ಅಂಪಾರು ಮೂಡುಬಗೆ ಬೂತನ್ನು‌ ಪಿಂಕ್ ಬೂತ್ ಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ.ಉಪ್ಪಿನಕುದ್ರು ಬೂತ್ ವಿಕಲಚೇತನ ಹಾಗೂ ಕೊಲ್ಲೂರು ಮತಗಟ್ಟೆಗಳು ಮಾದರಿ ಮತಗಟ್ಟೆಗಳಾಗಿವೆ.

ಚುನಾವಣಾ ಪ್ರಕ್ರಿಯೆಗಾಗಿ ಒಟ್ಟು 246 ಬೂತ್ಗಳಲ್ಲಿ 1355 ವಿವಿಧ ಅಧಿಕಾರಿಗಳು ಹಾಗೂ 303 ಡಿ ಗ್ರೂಪ್ ನೌಕರರು ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಬೈಂದೂರು ಕ್ಷೇತ್ರದಲ್ಲಿ 95 ಸೂಕ್ಷ್ಮ ಮತಗಟ್ಟೆ 59 ಅತೀ ಸೂಕ್ಷ್ಮ ಹಾಗೂ 95 ಸಾಮಾನ್ಯ ಮತಗಟ್ಟೆಗಳಿದ್ದು, ಚುನಾವಣೆ ಶಾಂತಿ ಸುವ್ಯವಸ್ಥೆಗಾಗಿ ಒಟ್ಟು 700 ಪೋಲಿಸರು, 2 ಪ್ಯಾರಾ ಮಿಲಿಟರಿ ತುಕಡಿ ಹಾಗೂ ಇತರ ಹೆಚ್ಚುವರಿ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version