ದಿನದ ಸುದ್ದಿ

ರಕ್ತ ವರ್ಗಾವಣೆ ಮಾಡಿ ಹಸುವಿಗೆ ಮರು ಜೀವ ನೀಡಿದ ಪಶುವೈದ್ಯರು

Published

on

ಸುದ್ದಿದಿನ,ಶಿವಮೊಗ್ಗ : ಮನುಷ್ಯರಲ್ಲಿ ರಕ್ತ ಹೀನತೆಗೆ ದಿನನಿತ್ಯ ಮಾಡುವ ರಕ್ತ ವರ್ಗಾವಣೆ ಪ್ರಾಣಿಗಳಲ್ಲಿ ಮಾಡುವುದು ಬಲು ಅಪರೂಪವೇ ಸರಿ. ವ್ಯವಸ್ಥಿತವಾದ ಸಂಗ್ರಹಣೆಯ ವ್ಯವಸ್ಥೆ ಇಲ್ಲದ ಕಾರಣ ತುರ್ತು ಪರುಸ್ಥಿತಿಯಲ್ಲಿ ಪಶುಗಳಲ್ಲಿ ರಕ್ತ ಸಂಗ್ರಹಣೆ ಹಾಗು ವರ್ಗಾವಣೆ ಬಹಳ ಕ್ಲಿಷ್ಟಕರವಾಗಿದೆ. ಆದರೂ ಪಶುಚಿಕಿತ್ಸಾಲಯ, ಮತ್ತೂರು, ಶಿವಮೊಗ್ಗ ವ್ಯಾಪ್ತಿಯಲ್ಲಿ ಬರುವ ಸಿದ್ದರಹಳ್ಳಿ ಗ್ರಾಮಾದಲ್ಲಿ ಈ ಅಪರೂಪದ ರಕ್ತ ವರ್ಗಾವಣೆಯೂ ಜರ್ಸಿ ಹಸುವೊಂದರಲ್ಲಿ ಯಶಸ್ವಿಯಾಗಿ ಮಾಡಿದ ವಿಷಯ ಭಾರಿ ಪ್ರಶಂಸೆಗೀಡಾಗಿದೆ.

ಸಿದ್ದರಹಳ್ಳಿ ಗ್ರಾಮದ ವಾಸಿಯಾದ ರತ್ನಮ್ಮ – ನರಸಿಂಹ ರವರ ಮನೆಯಲ್ಲಿ ಹಸುವೊಂದು ಸಮಯಕ್ಕೆ ತಕ್ಕ ಆರೋಗ್ಯತಪಾಸಣೆಯಾಗದೆ ಥೈಲೆರಿಯೊಸಿಸ್ ಖಾಯಿಲೆಯಿಂದ ಬಳಲುತ್ತ ತೀವ್ರ ರಕ್ತ ಹೀನತೆಗೆ ಒಳಗಾಗಿತ್ತು. ರಕ್ತ ಹೀನತೆಯನ್ನು ಅರಿತ ಅಲ್ಲಿನ ಪಶುವೈದ್ಯ ಡಾ. ಕಮಲೇಶ್ ಕುಮಾರ್ ಕೆ ಎಸ್ ರವರು ಜಾನುವರುವನ್ನು ತುರ್ತು ಚಿಕೆತ್ಸೆಗೆ ಒಳಪಡಿಸಿದ್ದಾರೆ.

ಆದರೂ ಹಸುವಿಗೆ ರಕ್ತದ ಅಗತ್ಯತೆಯನ್ನು ಅರಿತ ಅವರು ತಕ್ಷಣವೇ ಆರೋಗ್ಯವಂತ ಹಸುವಿನ ರಕ್ತದ ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯ ಪರೀಕ್ಷೆ ನಡೆಸಿ. ಆರೋಗ್ಯವಂತ ಹಸುವಿನಿಂದ ಒಂದೂವರೆ ಲೀಟರ್ (1.5) ನಷ್ಟು ರಕ್ತವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಖಾಯಿಲೆಯಿಂದ ನರಳುತ್ತಿದ್ದ ಹಸುವಿಗೆ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿದ 2 ತಿಂಗಳ ನಂತರ ಹಸು ರೋಗದಿಂದ ಸಂಪೂರ್ಣವಾಗಿ ಗುಣಮುಖಹೊಂದಿದ್ದು ಗ್ರಾಮದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಈ ಕುರಿತು ಮಾತನಾಡಿದ ಪಶುವೈದ್ಯ ಡಾ. ಕಮಲೇಶ್ ಕುಮಾರ್ ಕೆ ಎಸ್ ರವರು ಮಾತನಾಡಿ ಹಸುವಿನ ಮೈಮೇಲೆ ಸೇರಿಕೊಳ್ಳುವ ಉಣ್ಣೆಯು ರಕ್ತ ಹೀರುವ ಜೊತೆಗೆ ಕಚ್ಚುವುದರಿಂದ ರಕ್ತದ ಕಣಗಳಲ್ಲಿ ಸೇರುವ ಕೆಲವು ಪರಾವಲಂಬಿ ಜೀವಿಗಳಿಂದ ಈ ರೀತಿ ರಕ್ತಹೀನತೆಯಾಗುತ್ತದೆ. ಪರಾವಲಂಬಿ ಜೀವಿಗಳಾದ ಉಣ್ಣೆ, ಸೊಳ್ಳೆ, ನೊಣಗಳನ್ನು ತಡೆಯುವುದರಿಂದ ಇಂತಹ ಹಲವು ಮಾರಣಾಂತಿಕ ಖಾಯಿಲೆಯಿಂದ ಆಗುವ ಆರ್ಥಿಕ ನಷ್ಟವನ್ನು ತಡೆಯಬಹುದು.

ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ಆರೋಗ್ಯವಂತ ಹಸುವಿನಿಂದ ರಕ್ತ ವರ್ಗಾವಣೆ ಮಾಡಬಹುದು ಹಾಗು ರೈತರು ತಮ್ಮ ಜಾನುವರುವಿನ ರಕ್ತವನ್ನು ದಾನ ಮಾಡಿ ಸರಳವಾಗಿ ಒಂದು ಜೀವ ಉಳಿಸಬಹುದು ಹಾಗು ಅತಿಯಾದ ಮೂಢನಂಬಿಕೆಯಿಂದ ರಕ್ತ ದಾನ ಮಾಡಿಸಲು ಹಿಂಜರಿಯಬಾರದು ಎಂದು ಕಿವಿಮಾತು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version