ದಿನದ ಸುದ್ದಿ
ಕಬ್ಬಿನ ಬೆಳೆ ಖರೀದಿ ಆಗದ ಕಾರಣ ಕಬ್ಬಿಗೆ ಬೆಂಕಿ ಹಚ್ಚಿದ ರೈತ..!
ಸುದ್ದಿದಿನ,ಶಿವಮೊಗ್ಗ: ಕಬ್ಬು ಮಾರಾಟವಾಗದ ಹಿನ್ನೆಲೆ ಮನನೊಂದು ತಾನೇ ಬೆಳೆದ ಕಬ್ಬಿನ ಗದ್ದೆಗೆ ರೈತನೋರ್ವ ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಹೊಸನಗರ ತಾಲೂಕಿನ ಹಾರಂಬಳ್ಳಿಯ ಚಂದ್ರಶೇಖರ್ ಎಂಬ ರೈತ ಒಂದೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದ, ಆದರೆ ಲಾಕ್ ಡೌನ್ ಕಾರಣದಿಂದ ಅದರ ಖರೀದಿಗೆ ಯಾರೂ ಬಂದಿರಲಿಲ್ಲವಂತೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಕಬ್ಬು ನೆಲಕಚ್ಚಿದೆ. ಇದರಿಂದ ಮನನೊಂದ ರೈತ ಕಬ್ಬಿಗೆ ಬೆಂಕಿ ಹಚ್ಚಿ ಸುಮಾರು 4 ಲಕ್ಷ ನಷ್ಟಕ್ಕೆ ಗುರಿಯಾಗಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243