ದಿನದ ಸುದ್ದಿ

ಶಿವಮೊಗ್ಗ | ರೂ. 51.67 ಕೋಟಿ ಮೊತ್ತದ ಪ್ರಗತಿ ಸಾಧಿಸಿ 748 ಕಾಮಾಗಾರಿಗಳನ್ನು ಪೂರ್ಣಗೊಳಿಸಲಾಗಿದೆ : ಎಸ್.ಜಿ.ಶ್ರೀನಿವಾಸ್

Published

on

ಸುದ್ದಿದಿನ,ಶಿವಮೊಗ್ಗ: ಮಾರ್ಚ್-2021ಕ್ಕೆ ಮಂಡಳಿಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು, ಶೇ 77.65 ರಷ್ಟು ಹಾಗೂ ರೂ. 51.67 ಕೋಟಿ ಮೊತ್ತದ ಪ್ರಗತಿ ಸಾಧಿಸಿ 748 ಕಾಮಾಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಎಸ್.ಜಿ.ಶ್ರೀನಿವಾಸ್ ತಿಳಿಸಿದರು.

ಅವರು ಇಂದು ಎರಡು ದಿನಗಳ ಮಂಡಳಿ ವ್ಯಾಪ್ತಿಯ 13 ಜಿಲ್ಲೆಗಳ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

2019-20ನೇ ಸಾಲಿಗೆ ಮುಂದುವರೆದ 1397 ಕಾಮಗಾರಿಗಳು ಬಾಕಿ ಉಳಿದಿದ್ದು, ಕಳೆದ ಸಾಲಿನ ಜುಲೈ ಮಾಹೆಯಲ್ಲಿ ಹಾಗೂ ನವೆಂಬರ್ ಮಾಹೆಗಳಲ್ಲಿ ವೀಡಿಯೋ ಸಂವಾದ ನಡೆಸಿ ಹಾಗೂ ಜನವರಿ-21ರಲ್ಲಿ 7ರಿಂದ 8 ಜಿಲ್ಲೆಗಳಲ್ಲಿ ಖುದ್ದು ಪ್ರವಾಸ ನಡೆಸಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಆದಷ್ಟು ಶೀಘ್ರ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದ್ದರ ಪರಿಣಾಮವಾಗಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು, ಶೇ 77.65 ರಷ್ಟು ಹಾಗೂ ರೂ.51.67 ಕೋಟಿ ಮೊತ್ತದ ಪ್ರಗತಿ ಸಾಧಿಸಿ 748 ಕಾಮಾಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಇವರ ಅಧ್ಯಕ್ಷತೆಯಲ್ಲಿ 2021ರ ಜುಲೈ 12 ಹಾಗೂ 13 ರಂದು ಎರಡು ದಿನ ಮಂಡಳಿ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ 652 ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಸಂಬಂಧಿಸಿದ ಅನುಷ್ಠಾನಾಧಿಕಾರಿಗಳೂಂದಿಗೆ ವೀಡಿಯೋ ಸಂವಾದ ಸಭೆ ನಡೆಸಿ ಸೆಪ್ಟೆಂಬರ್-21ರ ಅಂತ್ಯದ ಒಳಗಾಗಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚನೆಗಳನ್ನು ನೀಡಲಾಯಿತು ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ತಿಳಿಸಿದರು.

ಜಿಲ್ಲಾವಾರು ಬೆಳಗಾವಿ-74, ಚಾಮರಾಜನಗರ-17, ದಾವಣಗೆರೆ-33, ಚಿಕ್ಕಮಗಳೂರು-32, ಧಾರವಾಡ-46, ಹಾಸನ-31, ಹಾವೇರಿ-25, ಕೊಡಗು-12, ಮಂಗಳೂರು-92, ಮೈಸೂರು-75, ಶಿವಮೊಗ್ಗ -75, ಉಡುಪಿ-68 ಹಾಗೂ ಉತ್ತರಕನ್ನಡ -88 ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೆ ಎಸ್ ಮಣಿ, ಕಾರ್ಯಪಾಲಕ ಇಂಜಿನಿಯರ್ ವಿಜಯ್ ಹೆಚ್.ವಿ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version