ದಿನದ ಸುದ್ದಿ

ಶಿರೂರು ಮಠದಲ್ಲಿ ಸಿಕ್ತಾ ವಿಷದ ಬಾಟಲಿ?

Published

on

ಸುದ್ದಿದಿನ ಡೆಸ್ಕ್: ಶಿರೂರು ಶ್ರೀಗಳ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಶಿರೂರು ಮಠದಲ್ಲಿ ಸಿಕ್ಕ ಖಾಲಿ ಬಾಟಲಿಯೊಂದರ ಮೇಲೆ ಗುಮಾನಿ ವ್ಯಕ್ತಪಡಿಸಿದ್ದಾರೆ.

ಶಿರೂರು ಶ್ರೀಗಳಿಗೆ ನೋನಿ ಹಣ್ಣಿನಿಂದ ಮಾಡಿದ ಆರೋಗ್ಯ ಪೇಯ ಕುಡಿಯುವ ಅಭ್ಯಾಸವಿತ್ತು. ಇದನ್ನು ಚೆನ್ನಾಗಿ ಬಲ್ಲ ಆಪ್ತರೊಬ್ಬರು ಈ ಬಾಟಲಿಯೊಳಗೆ ವಿಷ ಹಾಕಿ ಕೊಂದಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಮೋರಿನ್‍ಜಿ ಹೆಸರಿನ ಈ ಬಾಟಲಿಯನ್ನು ಪೊಲೀಸರು ಪ್ರಯೋಗಾಲಯಕ್ಕೆ ಕಳಿಸಿದ್ದು, ಅದರ ಫಲಿತಾಂಶ ಬಂದ ನಂತರವಷ್ಟೇ ಖಚಿತವಾಗಲಿದೆ.

ಸೋದೆ ಶ್ರೀ ಆರಾಧನೆ:

ಶೀರೂರು ಶ್ರೀಗಳ ಸಾವಿನ ಹಿನ್ನೆಲೆಯಲ್ಲಿ ದ್ವಂದ್ವ ಮಠವಾಗಿರುವ ಸೋದೆ ಮಠವು ಶೀರೂರು ಮಠದ ಉಸ್ತುವಾರಿ ವಹಿಸಿಕೊಂಡಿದ್ದು, ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ, ಆರಾಧನೆಗಳು ನಡೆಯಲಿವೆ.

English summary: shiroor swamiji death twist.

Leave a Reply

Your email address will not be published. Required fields are marked *

Trending

Exit mobile version