ದಿನದ ಸುದ್ದಿ
ಶಾಕಿಂಗ್ : ಮದ್ಯ ಸೇವನೆಯಿಂದ ಶಿರೂರು ಶ್ರೀ ಸಾವು ?
ಸುದ್ದಿದಿನ ಡೆಸ್ಕ್: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸಾವಿನ ಕುರಿತು ದಿನಕ್ಕೊಂದು ಸುದ್ದಿಗಳು ಹೊರ ಬರುತ್ತಿದ್ದು, ಈಗ ಶಾಕಿಂಗ್ ಮಾಹಿತಿ ಹೊರ ಬಿದ್ದಿದೆ. ಸ್ವಾಮೀಜಿಗೆ ಕುಡಿತದ ಚಟವಿತ್ತು. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮದ್ಯಪಾನ ಮುಂದುವರಿಸಿದರೆ ಮೂರು ತಿಂಗಳಲ್ಲಿ ಸಾವು ಸಂಭವಿಸಬಹುದು ಎಂದು ವೈದ್ಯರು ಸೂಚಿಸಿದ್ದರು. ಜತೆಗೆ ಶ್ರೀಗಳಿಗೆ 90 ಸಾವಿರ ರೂಪಾಯಿ ಮೌಲ್ಯದ ಇಂಜೆಕ್ಷನ್ ನೀಡಲಾಗುತ್ತಿತ್ತು. ಆದರೆ ಶ್ರೀಗಳು ಮದ್ಯಸೇವನ ಮುಂದುವರಿಸಿದ್ದರು. ಅದರಿಂದ ಸಾವು ಸಂಭವಿಸಿದೆ ಎಂಬ ವದಂತಿ ಹರಿದಾಡುತ್ತಿವೆ. ಆದರೆ ಇದು ನಿಜವೇ ಎಂಬ ಅನುಮಾನ ಮೂಡಿಸಿದೆ.