ದಿನದ ಸುದ್ದಿ
ಕೊನೆಗೂ ಬಯಲಾಯ್ತು ಶೀರೂರು ಶ್ರೀ ನಿಗೂಢ ಸಾವಿನ ಸೀಕ್ರೆಟ್ | ರಮ್ಯಾ ಶೆಟ್ಟಿ ಗೊಡಂಬಿ ಜ್ಯೂಸ್ ನಲ್ಲಿ ಹಾಕಿದ್ದಳು ವಿಷ ?
ಸುದ್ದಿದಿನ ಡೆಸ್ಕ್ |ಪೊಲೀಸ್ ವಶದಲ್ಲಿರುವ ರಮ್ಯಾ ಶೆಟ್ಟಿಯಿಂದ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಶಿರೂರುಶ್ರೀಗಳಿಗೆ ಗೋಡಂಬಿ ಜ್ಯೂಸ್ ವಿಷಹಾಕಿರುವು ಸೇವಕಿ ರಮ್ಯಾ ಶೆಟ್ಟಿ ಎಂದು ಸ್ಪಷ್ಟ ಪಡಿಸಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಿರೂರು ಮೂಲ ಮಠದಲ್ಲಿ ಪತ್ತೆಯಾಗಿದ್ದ
ಗೋಡಂಬಿ ಹುಡಿ ಆಧರಿಸಿ ವಿಚಾರಣೆ ಮಾಡುತ್ತಿರುವ ಪೊಲೀಸರು, ರಮ್ಯಾ ಶೆಟ್ಟಿಯೇ ಗೋಡಂಬಿ ಜ್ಯೂಸ್ನಲ್ಲಿ ವಿಷ ಹಾಕಿರೋ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಹಣಕಾಸು ವಿಚಾರಕ್ಕೆ ಶ್ರೀಗಳ ಜತೆ ಗಲಾಟೆ ಮಾಡಿಕೊಂಡಿದ್ದ ರಮ್ಯಾ ಶೆಟ್ಟಿಯನ್ನು ಗಲಾಟೆ ನಂತರ ಮಠದಿಂದ ತೆಗೆದು ಹಾಕಲು ಮುಂದಾಗಿದ್ದರು ಶ್ರೀಗಳು. ಪೊಲೀಸ್ ವಿಚಾರಣೆ ವೇಳೆ ಈ ವಿಚಾರ ಒಪ್ಪಿಕೊಂಡಿದ್ದಾರೆ ರಮ್ಯಾ ಶೆಟ್ಟಿ. ಇತ್ತ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ವಿಷದ ಅಂಶ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401