ದಿನದ ಸುದ್ದಿ

ಶಿರೂರು ಶ್ರೀ ಅಸಹಜ ಸಾವು ಪ್ರಕರಣ | ರಮ್ಯಾ ಶೆಟ್ಟಿ ಎಸ್ಕೇಪ್‌ಗೆ ಯತ್ನ; ಬಂಧನ !

Published

on

ಸುದ್ದಿದಿನ ಡೆಸ್ಕ್ | ಮ್ಯಾ ಶೆಟ್ಟಿ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಶಿರೂರು ಶ್ರೀ ಅಸಹಜ ಸಾವು ಪ್ರಕರಣದಲ್ಲಿ ರಮ್ಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ರಮ್ಯಾ ಅವರು ಬುರ್ಖಾ ಧರಿಸಿ ಮೂವರು ಮಹಿಳೆಯರ ಜೊತೆಗೆ ಕಾರ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಬಳಿ ಕಾರು ನಿಂತಿದೆ.
ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ವೇಣೂರು ಪೊಲೀಸರು ರಮ್ಯಾ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮ್ಯಾ ಶೆಟ್ಟಿ ಸೇರಿದಂತೆ ಐವರನ್ನು ಉಡುಪಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

Trending

Exit mobile version