ದಿನದ ಸುದ್ದಿ
ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣ ; ನದಿಯಲ್ಲಿ ಮತ್ತೆ ಎರಡು ಶವ ಪತ್ತೆ
ಸುದ್ದಿದಿನಡೆಸ್ಕ್:ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಪರಿಣಾಮ ಇಂದು ಬೆಳಗಿನ ಜಾವ ಗಂಗಾವಳಿ ನದಿಯಲ್ಲಿ ಮತ್ತೆ ಎರಡು ಶವ ಪತ್ತೆಯಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
ಕಣ್ಮರೆಯಾಗಿದ್ದ 6 ವರ್ಷದ ಬಾಲಕಿ ಆವಂತಿಕಾ ನಾಯ್ಕ ಮತ್ತು ಟ್ಯಾಂಕರ್ ಚಾಲಕನ ಮೃತದೇಹ ಎಂದು ಗುರುತಿಸಲಾಗಿದೆ. ಬಾಲಕಿಯ ಮೃತದೇಹ ಗೋಕರ್ಣ ಸಮೀಪ ಗಂಗೆಕೊಳ್ಳದಲ್ಲಿ ದೊರೆತಿದೆ. ಘಟನೆ ನಡೆದ ಸ್ಥಳದ ಸಮೀಪದಲ್ಲಿಯೇ ನದಿಗೆ ಬಿದ್ದಿರುವ ಮಣ್ಣಿನ ರಾಶಿ ಬಳಿ ಚಾಲಕನ ಮೃತದೇಹ ಪತ್ತೆಯಾಗಿದೆ.
ದುರ್ಘಟನೆಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ, ಇನ್ನೂ ಸ್ಥಳೀಯ ಮೂವರು ಸೇರಿದಂತೆ ಹಲವರು ಕಣ್ಮರೆಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ತಂಡದ ಸದಸ್ಯರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಘಟನೆಯಲ್ಲಿ ಎರಡು ಗ್ಯಾಸ್ ಟ್ಯಾಂಕರ್‌ಗಳು ನದಿಯಲ್ಲಿ ಬಿದ್ದಿದ್ದು, ಅನಿಲ ಸೋರಿಕೆಯಾಗುವ ಆತಂಕದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243