ಸಿನಿ ಸುದ್ದಿ

ಮೈಸೂರು ದಸರಾ : ಉತ್ಸವ ಕಣ್ತುಂಬಿ ಕೊಂಡ ಶಿವಣ್ಣ ದಂಪತಿ

Published

on

ಸುದ್ದಿದಿನ ಡೆಸ್ಕ್ : ವಕರುನಾಡ ಚಕ್ರವರ್ತಿ ನಟ ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​​ಕುಮಾರ್​​ ಕುಟುಂಬ ಸಮೇತರಾಗಿ ಮೈಸೂರು ದಸರಾ ವೀಕ್ಷಣೆ ಮಾಡಿದರು.

ಒಂದೆಡೆ ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ ಶಿವಣ್ಣ ಹಾಗೂ ಸುದೀಪ್​ ಫ್ಯಾನ್ಸ್​ ಮಧ್ಯೆ ಚಟಾಪಟಿ ನಡೆಯುತ್ತಿದೆ. ಇನ್ನೊಂದೆಡೆ, ಶಿವಣ್ಣ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಶಿವಣ್ಣ ಮಾತ್ರ, ಇದ್ಯಾವುದರ ಕುರಿತು ಹೆಚ್ಚು ತಲೆಕೆಡೆಸಿಕೊಳ್ಳದೇ ಮೈಸೂರಿನಲ್ಲಿ ಕುಟುಂಬದ ಜೊತೆ ಜಂಬೂ ಸವಾರಿ ವೀಕ್ಷಣೆ ಮಾಡುತ್ತಿದ್ದಾರೆ. ಅತ್ಯಂತ ಪ್ರಭುದ್ಧ ನಟರಾಗಿರುವ ಶಿವಣ್ಣ, ಈ ಮೊದಲು ಕೂಡ ಈ ಸಿನಿಮಾವನ್ನು ಕೇವಲ ಸಿನಿಮಾವನ್ನಾಗಿ ಮಾತ್ರ ನೋಡಿ ಅಂತಾ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version