ಸಿನಿ ಸುದ್ದಿ
ಶಿವಣ್ಣನ 125 ನೇ ಸಿನೆಮಾ ‘ವೇದ’ ಪೋಸ್ಟರ್ ರಿಲೀಸ್..!
ಸುದ್ದಿದಿನ ಡೆಸ್ಕ್ : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ 125 ನೇ ಸಿನೆಮಾ ‘ವೇದ’. ಈ ವೇದ ಸಿನೆಮಾದ ಮೊದಲ ಪೋಸ್ಟರ್ ಅನ್ನು ಶಿವರಾತ್ರಿ ಹಬ್ಬವಾದ ಇಂದು ಬೆಳಗ್ಗೆ 8:15 ಕ್ಕೆ ಶಿವಣ್ಣನ ಫೇಸ್ ಬುಕ್ ಪೇಜ್ ಮೂಲಕ ರಿವೀಲ್ ಮಾಡಲಾಯಿತು.
ಬುಧವಾರ ಶಿವಣ್ಣ ಫೇಸ್ ಬುಕ್ ನಲ್ಲಿ ಲೈವ್ ಬಂದು ತನ್ನ 125 ನೇ ಸಿನೆಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಹರಸಿ ಹಾರೈಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.
ಅಂದಹಾಗೆ ವೇದ ಸಿನೆಮಾದ ನಿರ್ಮಾಣವನ್ನು ಗೀತಾ ಶಿವರಾಜ್ ಕುಮಾರ್ ಮಾಡುತ್ತಿದ್ದು, ಭಜರಂಗಿ ಖ್ಯಾತಿಯ ಎ.ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತವಿದೆ. ಸಂಭಾಷಣೆಯ ಹೊಣೆಯನ್ನು ರಘು ನಿಡುವಳ್ಳಿ ವಹಿಸಿದ್ದು, ದೀಪು ಎಸ್.ಕುಮಾರ್ ಅವರ ಸಂಕಲನವಿದೆ.
Here is the first look of Shivanna's 125th film #Vedha 🙂 directed by @NimmaAHarsha 🙂
produced by #GeethaPictures
music scored by #ArjunJanya #Shivanna125 #Vedha pic.twitter.com/khxOO34ODH— Vedha The Movie (@VedhaThe) March 11, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243