ಸಿನಿ ಸುದ್ದಿ
ಎಚ್.ಡಿ.ಕೆ ಭೇಟಿ ಮಾಡಿದ ಶಿವಣ್ಣ ದಂಪತಿ
ಸುದ್ದಿದಿನ ಡೆಸ್ಕ್ |ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಪತ್ನಿ ಗೀತಾ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರನ್ನು ಶನಿವಾರ (ಆಗಸ್ಟ್ 5) ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದರು.
ಪಾರ್ವತಮ್ಮ ರಾಜ್ ಕುಮಾರ್ ಅವರು ಮೈಸೂರಿನಲ್ಲಿ ನಡೆಸುತ್ತಿದ್ದ ಶಾಂತಿಧಾಮದ ಅಭಿವೃದ್ಧಿ ಹಾಗೂ ಶಾಲೆಯೊಂದನ್ನು ತೆರೆಯುವ ಬಗ್ಗೆ ಅವರು ಚರ್ಚಿಸಿದರು.
ಎಚ್.ಡಿ.ಕೆ ಭೇಟಿ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ ಶಿವಣ್ಣ “ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಉಪಚುನಾವಣೆಗೆ ಗೀತಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದು ಕೊಂಡಿಲ್ಲ ಎಂದರು.